ಕರಾವಳಿಸುಳ್ಯ

ಸುಳ್ಯ:ಎನ್‌.ಎಂ.ಸಿಯ ಹಿರಿಯ ವಿದ್ಯಾರ್ಥಿ ‘ಸಚಿನ್ ಗೌಡ ಕೆ. ಯು’ ಸಿ.ಎ.ಪರೀಕ್ಷೆಯಲ್ಲಿ ತೇರ್ಗಡೆ,ವಿದ್ಯಾರ್ಥಿಗೆ ಹರಿದು ಬಂದ ಅಭಿನಂದನೆಗಳ ಮಹಾಪೂರ

ನ್ಯೂಸ್ ನಾಟೌಟ್ :ಇನ್‌ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್‌ ಇಂಡಿಯಾ (ಐಸಿಎಐ), ಚಾರ್ಟೆಡ್ ಅಕೌಂಟೆನ್ಸಿ (ಸಿಎ) ಅಂತಿಮ ಮತ್ತು ಇಂಟರ್ ಪರೀಕ್ಷೆಯ ಫಲಿತಾಂಶಗಳನ್ನು ಪ್ರಕಟಿಸಿದೆ. ‘ಸಚಿನ್. ಕೆ.ಯು’ ಉತ್ತಮ ಸಾಧನೆ ಮಾಡುವುದರೊಂದಿಗೆ ಕಾಲೇಜಿನ ಕೀರ್ತಿಗೆ ಪಾತ್ರರಾಗಿದ್ದಾರೆ.

ಎನ್ನೆಂಸಿ ಹಳೆ ವಿದ್ಯಾರ್ಥಿ ‘ಸಚಿನ್. ಕೆ.ಯು’ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಕಾರೆಕೊಪ್ಪ ಗ್ರಾಮದ ಉಮೇಶ್ ಹಾಗೂ ಚಂದ್ರಮ್ಮ ದಂಪತಿ ಪುತ್ರ. 2014-2017 ಸಾಲಿನ ಎನ್‌.ಎಂ.ಸಿ ವಿದ್ಯಾರ್ಥಿಯಾಗಿದ್ದ ಇವರು ಸಿ.ಎ. ಪರೀಕ್ಷೆಯಲ್ಲಿ ತೇರ್ಗಡೆಗೊಂಡಿದ್ದು,ಶಿಕ್ಷಕ ವೃಂದದವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.ಇವರನ್ನು ಆಡಳಿತ ಮಂಡಳಿ, ಪ್ರಾಂಶುಪಾಲರು, ಬೋಧಕ -ಬೋಧಕೇತರ ವೃಂದದವರು ಅಭಿನಂದಿಸಿದ್ದಾರೆ.

Related posts

ಮಂಗಳೂರು: ಸಮುದ್ರ ಮಧ್ಯೆ ಕುಸಿದುಬಿದ್ದದ್ದೇಕೆ ನೌಕಾ ಸಿಬ್ಬಂದಿ..? ಆ ಮಧ್ಯರಾತ್ರಿ ತೈಲ ಸಾಗಾಟ ನೌಕೆಯಲ್ಲಿದ್ದಾತನಿಗೇನಾಯ್ತು..?

ಕೊಕ್ಕಡ : ಚುನಾವಣೆಯಲ್ಲಿ ಗೆಲುವಿಗಾಗಿ ಸೌತಡ್ಕ ಗಣಪತಿಗೆ ಹರಕೆ..!,ಗಂಟೆ ನೀಡಿ ಹರಕೆ ತೀರಿಸಿದ ಮೂಡಿಗೆರೆ ಶಾಸಕಿ ನಯನ ಮೋಟಮ್ಮ..!

ಒಕ್ಕಲಿಗರ ಗೌಡ ಸೇವಾ ಸಂಘ (ರಿ) ಚಿಲಿಂಬಿ ಮಂಗಳೂರು ಯುವ ಘಟಕಕ್ಕೆ ಅಧ್ಯಕ್ಷರಾಗಿ ಕಿರಣ್ ಬುಡ್ಲೆಗುತ್ತು ಆಯ್ಕೆ