ಕರಾವಳಿಕ್ರೈಂ

ಸುಳ್ಯ: ತಮ್ಮನಿಗೆ ಅಡಿಕೆ ಕೊಯ್ಯುವ ಕತ್ತಿಯಿಂದ ಮಾರಣಾಂತಿಕ ಹಲ್ಲೆ ನಡೆಸಿದ ಅಣ್ಣ..! ಆಸ್ತಿ ವಿಚಾರದಲ್ಲಿ ನಡೆದ ಗಲಾಟೆಯಿಂದ ಹರಿಯಿತು ನೆತ್ತರು..!

ನ್ಯೂಸ್ ನಾಟೌಟ್ : ಹುಟ್ಟು ಹುಟ್ಟುತ್ತಾ ಅಣ್ಣ ತಮ್ಮಂದಿರು…ಬೆಳೆ ಬೆಳೆಯುತ್ತಾ ದಾಯಾದಿಗಳು ಅನ್ನುವ ಮಾತು ನಿಜವಾಗಿದೆ. ಇಲ್ಲೊಬ್ಬ ಅಣ್ಣ ಆಸ್ತಿ ವಿಚಾರದಲ್ಲಿ ಸ್ವಂತ ತಮ್ಮನ ಮೇಲೆ ಅಡಿಕೆ ಕೊಯ್ಯುವ ಕತ್ತಿಯಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಸುಳ್ಯದ ಮುಳ್ಯ ಅಟ್ಲೂರು ಎಂಬಲ್ಲಿ ನಡೆದಿದೆ ಎಂದು ವರದಿಯಾಗಿದೆ.

ಮುಳ್ಯ ಅಟ್ಲೂರು ಎಂಬಲ್ಲಿ ಕಳೆದ ಕೆಲವು ಸಮಯಗಳಿಂದ ಜಾಗದ ವಿಷಯದಲ್ಲಿ ಅಣ್ಣ -ತಮ್ಮಂದಿರ ನಡುವೆ ಆಗಾಗ್ಗೆ ಜಗಳ ನಡೆಯುತ್ತಿತ್ತು. ಸಿಟಿಗೆದ್ದ ಅಣ್ಣ ನಿನ್ನನ್ನು ಕೊಲೆ ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಭಾನುವಾರ ಅಣ್ಣ-ತಮ್ಮನ ನಡುವೆ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಸಿಟ್ಟಿಗೆದ್ದ ಅಣ್ಣ ಅಡಿಕೆ ಕೊಯ್ಯುವ ಗಳೆ ಕತ್ತಿಯಿಂದ ಕತ್ತು ಸೀಳಲು ಮುಂದಾಗಿದ್ದಾನೆ.

ಈ ವೇಳೆ ತಮ್ಮ ತಪ್ಪಿಸಿಕೊಂಡಿದ್ದರಿಂದ ಎದೆ ಮತ್ತು ಭುಜಕ್ಕೆ ಗಂಭೀರ ಗಾಯಗೊಂಡು ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾನೆ. ಅದೃಷ್ಟವಶಾತ್ ತಮ್ಮನಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಮನೆಯವರು ಇದೀಗ ಪೊಲೀಸ್ ದೂರು ನೀಡಲು ನಿರ್ಧರಿಸಿದ್ದಾರೆಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Related posts

ಬಸ್ ಗಾಗಿ ಕಾಯುತ್ತಿದ್ದ ಯುವತಿಯನ್ನು ಆಟೋದಲ್ಲಿ ಕಿಡ್ನ್ಯಾಪ್..!​ ಪೊಲೀಸ್ ಕಂಟ್ರೋಲ್​ ರೂಂಗೆ ಕರೆ ಮಾಡಿದ್ದ ಸ್ಥಳೀಯರು..!

ಮೈಸೂರು ಫೋಟೋ ಗ್ರಾಫರ್ ಕೊಲೆ ಪ್ರಕರಣ: 5ನೇ ಆರೋಪಿ ಅಣಿಲೆ ಜಯರಾಜ ಶೆಟ್ಟಿ ಅರೆಸ್ಟ್

ಪುತ್ತೂರು:ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ರೈ ತಿಂಗಳಾಡಿ,ಸಂಪ್ಯ ಭೇಟಿ