ಕರಾವಳಿಸುಳ್ಯ

ಸುಳ್ಯ:ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ನ್ಯೂಸ್ ನಾಟೌಟ್ : ಮರ್ಕಂಜದ ನಿವಾಸಿಯೊಬ್ಬರು ಕಳೆದೆರಡು ದಿನಗಳ ಹಿಂದೆ ನಾಪತ್ತೆಯಾಗಿರುವ ಬಗ್ಗೆ ವರದಿಯಾಗಿದ್ದು,ಇದೀಗ ಅವರ ಮೃತದೇಹ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಕುಸುಮಾಧರ ಮುಂಡೋಡಿ ಎಂಬವರ ಮೃತದೇಹವು ಅರಂತೋಡಿನಲ್ಲಿ ಪತ್ತೆಯಾಗಿದೆ.ಎರಡು ದಿನಗಳ ಹಿಂದೆ ಅವರು ನಾಪತ್ತೆಯಾಗಿದ್ದು, ಈ ಕುರಿತು ಪೊಲೀಸರಿಗೂ ಮಾಹಿತಿ ನೀಡಲಾಗಿತ್ತು.ಕುಸುಮಾಧರರು ಅರಂತೋಡಿನಲ್ಲಿ ವಾಸವಾಗಿದ್ರು. ಇಂದು ಅವರು ವಾಸವಿದ್ದ ಮನೆಯ ಪಕ್ಕದ ತೋಟದಲ್ಲಿ ಕೊಕ್ಕೋ ಮರವೊಂದಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿರುವುದಾಗಿ ತಿಳಿದುಬಂದಿದೆ.

Related posts

ವೀರ ಸೇನಾನಿ ಸಾವರ್ಕರ್‌ ಪೋಸ್ಟರ್‌ ಹಾಕಿದ್ದಕ್ಕೆ ವ್ಯಕ್ತಿಯಿಂದ ಆಕ್ಷೇಪ

ಕುದಿಯುತ್ತಿದ್ದ ಎಣ್ಣೆ ಬಾಣಲೆಗೆ ಹಾರಿ ಬೇಕರಿ ಕೆಲಸಗಾರ ಆತ್ಮಹತ್ಯೆ

ಸುಳ್ಯ: ಸಂತ ಜೋಸೆಫ್ ಶಾಲೆಗೆ ಪೋಷಕರ ಸಂಘಟನೆಯಿಂದ ಚೆಸ್ ಟೈಮೆರ್ ಕೊಡುಗೆ