ಕರಾವಳಿ

ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಅಧ್ಯಕ್ಷ ಡಾ|ಕೆ.ವಿ.ಚಿದಾನಂದರಿಗೆ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪ್ರಶಸ್ತಿ 2023 ಪ್ರಧಾನ

ನ್ಯೂಸ್ ನಾಟೌಟ್: ಸುಳ್ಯದ ಅಮರಶಿಲ್ಪಿ ದಿವಂಗತ ಕುರುಂಜಿ ವೆಂಕಟರಮಣ ಗೌಡರ ಹಿರಿಯ ಪುತ್ರ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಅಧ್ಯಕ್ಷ ಡಾ|ಕೆ.ವಿ.ಚಿದಾನಂದ ಅವರಿಗೆ ದ.ಕ.ಜಿಲ್ಲಾ ಕನ್ನಡ ಸಾಹಿತ್ಯ ಪ್ರಶಸ್ತಿ -2023 ದೊರಕಿದೆ.

ಧರ್ಮಸ್ಥಳದ ಧರ್ಮಾಧಿಕಾರಿ ಮತ್ತು ರಾಜ್ಯ ಸಭೆ ಸದಸ್ಯರಾದ ಡಾ. ವೀರೇಂದ್ರ ಹೆಗ್ಗಡೆಯವರು, ಅವರ ಧರ್ಮಪತ್ನಿ ಹಾಗೂ ಜಿಲ್ಲಾ ಸಮ್ಮೇಳನಾಧ್ಯಕ್ಷೆಯಾಗಿರುವ ಹೇಮಾವತಿ ಹೆಗ್ಗಡೆ ಮತ್ತಿತರ ಗಣ್ಯರ ಸಮ್ಮುಖದಲ್ಲಿ ಗೌರವ ಸ್ವೀಕರಿಸಿದರು. ಡಾ|ಕೆ.ವಿ.ಚಿದಾನಂದ ಅವರು ವೈದ್ಯರಾಗಿ, ಸಮಾಜ ಸೇವಕರಾಗಿ ಸಾಕಷ್ಟು ಹೆಸರು ಮಾಡಿದ್ದಾರೆ. ಇವರ ತಂದೆ ಕುರುಂಜಿ ವೆಂಕಟರಮಣ ಗೌಡರ ಹಾದಿಯಲ್ಲೇ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಸಂಸ್ಥೆಯನ್ನು ಮತ್ತಷ್ಟು ಎತ್ತರಕ್ಕೆ ಬೆಳೆಸುವಲ್ಲಿ ಡಾ|ಕೆ.ವಿ.ಚಿದಾನಂದ ಅವರು ಶ್ರಮಿಸುತ್ತಿದ್ದಾರೆ. ಈ ಎಲ್ಲ ಸಾಧನೆಯನ್ನು ಪರಿಗಣಿಸಿ ಅವರಿಗೆ ಪ್ರಶಸ್ತಿ ನೀಡಲಾಗಿದೆ.

Related posts

ಅಪರಿಚಿತ ವಾಹನ ಡಿಕ್ಕಿ: ತಂದೆ ಸಾವು, ಮಗು ಗಂಭೀರ

ಕಾರ್ಕಳ: ಕಾಂಗ್ರೆಸ್‌ನಿಂದ ಮೇ1ರಂದು ಅದ್ದೂರಿ ರೋಡ್ ಶೋ, ಬೃಹತ್ ಸಮಾವೇಶ;ಸಾವಿರಾರು ಮಂದಿ ಭಾಗವಹಿಸುವ ನಿರೀಕ್ಷೆ

ಸುಳ್ಯ:ಕೆವಿಜಿ ಸಮೂಹ ಸಂಸ್ಥೆಗಳು ಆಯೋಜಿಸಿದ್ದ 5 ದಿನಗಳ ವಿಶೇಷ ಯೋಗ ಶಿಬಿರ;ಯೋಗಾಸನ,ಪ್ರಾಣಾಯಾಮ,ಧ್ಯಾನ ತರಬೇತಿಯಲ್ಲಿ ಭಾಗವಹಿಸಿದ ಮಹಿಳೆಯರು..!