ಕ್ರೈಂವೈರಲ್ ನ್ಯೂಸ್ಸುಳ್ಯ

ಸುಳ್ಯ: ಶವಾಗಾರದಲ್ಲಿ ಮೃತ ದೇಹ ಇಡುತ್ತಿದ್ದಂತೆ ಮುಂದಕ್ಕೆ ಚಲಿಸಿತು ಕಾರು..! ಫಿಲ್ಮಿ ಸ್ಟೈಲ್ ನಲ್ಲಿ ಎರಡು ಕಾರುಗಳ ನಡುವೆ ನುಗ್ಗಿ ಡಾಕ್ಟರ್ಸ್ ಕ್ವಾಟ್ರರ್ಸ್ ಗೆ ಗುದ್ದಿದ ಕಾರಿಗೆ ಭಾರಿ ಹಾನಿ..!

ನ್ಯೂಸ್ ನಾಟೌಟ್: ಸುಳ್ಯದ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಮೃತ ದೇಹ ಇಡುತ್ತಿದ್ದಂತೆ ಕಾರೊಂದು ಮುಂದಕ್ಕೆ ಚಲಿಸಿದ ಘಟನೆ ಜು.28ರ ತಡರಾತ್ರಿ ಸುಳ್ಯದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ನಡೆದಿದೆ. ಸದ್ಯ ಕಾರು ಮತ್ತು ಡಾಕ್ಟರ್ಸ್ ಕ್ವಾಟ್ರರ್ಸ್ ನ ಗೋಡೆಗೆ ಭಾರಿ ಹಾನಿಯಾಗಿದೆ ಎಂದು ತಿಳಿದು ಬಂದಿದೆ.

ಗುತ್ತಿಗಾರಿನ ಪುರುಷರೊಬ್ಬರು ಮುರೂರಿನಲ್ಲಿರುವ ತನ್ನ ಮಗಳ ಮನೆಗೆಂದು ಬಂದಿದ್ದರು. ಈ ವೇಳೆ ಅವರಿಗೆ ಅನಾರೋಗ್ಯ ಉಂಟಾಗಿದೆ. ಅವರನ್ನು ಗಡಿಬಿಡಿಯಲ್ಲಿ ಕಾರಿನಲ್ಲಿ ಕರೆದುಕೊಂಡು ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಬರಲಾಗುತ್ತೆ. ಸರ್ಕಾರಿ ಆಸ್ಪತ್ರೆಗೆ ತಲುಪುವಷ್ಟರಲ್ಲಿ ವ್ಯಕ್ತಿ ಮೃತಪಟ್ಟಿದ್ದಾರೆಂದು ವೈದ್ಯರು ತಿಳಿಸುತ್ತಾರೆ. ಬಳಿಕ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಯ ಶವಾಗಾರಕ್ಕೆ ತೆಗೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಇತ್ತ ಅವರನ್ನು ಕರೆದುಕೊಂಡು ಬಂದಿದ್ದ ಕಾರು ನ್ಯೂಟ್ರಲ್ ಆಗಿ ಮುಂದಕ್ಕೆ ಚಲಿಸಿದೆ. ಈ ವೇಳೆ ಒಳಗಡೆ ಮಹಿಳೆಯೊಬ್ಬರು ಇದ್ದರು. ಅವರು ಗಾಬರಿಯಿಂದ ಕಿರುಚುತ್ತಿದ್ದಂತೆ ಕಾರು ಅಲ್ಲೆ ನಿಂತಿದ್ದ ಎರಡು ಕಾರುಗಳ ನಡುವೆ ನುಗ್ಗಿಕೊಂಡು ನೇರವಾಗಿ ಮುಂದಿದ್ದ ಡಾಕ್ಟರ್ಸ್ ಕ್ವಾಟ್ರರ್ಸ್ ನ ಗೋಡೆಗೆ ಗುದ್ದಿದೆ. ಗುದ್ದಿದ ರಭಸಕ್ಕೆ ಡಾಕ್ಟರ್ಸ್ ಕ್ವಾಟ್ರರ್ಸ್ ಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ. ಅದೃಷ್ಟವಶಾತ್ ಕಾರಿನೊಳಗೆ ಇದ್ದ ಮಹಿಳೆಗೆ ಯಾವುದೇ ಅಪಾಯವಾಗಿಲ್ಲ ಎಂದು ತಿಳಿದು ಬಂದಿದೆ. ಗಾಡಿಯನ್ನು ಗೇರಿನಲ್ಲಿ ಇಡದೆ ನ್ಯೂಟ್ರಲ್ ನಲ್ಲಿ ಇಟ್ಟದ್ದೇ ಕಾರು ಮುಂದಕ್ಕೆ ಚಲಿಸುವುದಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದೆ.

Click

https://newsnotout.com/2024/07/darshan-food-and-health-issue-kannada-news-highcourt-e/
https://newsnotout.com/2024/07/dakshina-kannada-news-moodabidire-family-incident-viral-news/

Related posts

ಸುಳ್ಯ: ಮಾನಿಟರ್‌, ಕಂಪ್ಯೂಟರ್, ಎಲ್‌ಇಡಿ ಟಿವಿ ಕಳವು

ಇಂದು ಮಧ್ಯಾಹ್ನ ದರ್ಶನ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಿರುವ ಪೊಲೀಸರು, ಕೋರ್ಟ್‌, ಜೈಲಿನ ಬಳಿ ಬಿಗಿ ಬಂದೋಬಸ್ತ್

ಒಡಿಯೂರು: ಮಾರ್ಬಲ್ ತುಂಬಿಕೊಂಡು ಬಂದಿದ್ದ ಲಾರಿ ಪಲ್ಟಿ, ನಾಲ್ವರು ಕಾರ್ಮಿಕರ ಕಾಲು ಛಿದ್ರ, ಗಂಭೀರ ಗಾಯ