ಕರಾವಳಿಸುಳ್ಯ

ಸುಳ್ಯ: ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜಿನ ಧನ್ವಂತರಿ ಹಾಲ್‌ನಲ್ಲಿ ಯೋಗ ತರಬೇತಿ ಕಾರ್ಯಕ್ರಮ;ಮಹಿಳಾ ದಿನಾಚರಣೆಯ ಪ್ರಯುಕ್ತ ನಡೆದ ಮೊದಲನೇ ದಿನದ ಯೋಗ ತರಬೇತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಹಿಳೆಯರು

ನ್ಯೂಸ್ ನಾಟೌಟ್: ಸುಳ್ಯದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿರುವ ಕೆವಿಜಿ ಕ್ಯಾಂಪಸ್ ನಲ್ಲಿ 5 ದಿನಗಳ ಯೋಗ ತರಬೇತಿ ಕಾರ್ಯಕ್ರಮ ಇಂದಿನಿಂದ ಆರಂಭಗೊಂಡಿದೆ.ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸುವ ಸಲುವಾಗಿ ಕೆವಿಜಿ ಸಮೂಹ ಸಂಸ್ಥೆಯ ಮಹಿಳಾ ಉದ್ಯೋಗಿಗಳಿಗಾಗಿ ಯೋಗ ತರಬೇತಿ ಕಾರ್ಯಕ್ರಮ ಕೆ.ವಿ.ಜಿ. ಅಯುರ್ವೇದ ಮೆಡಿಕಲ್ ಕಾಲೇಜಿನ ಧನ್ವಂತರಿ ಹಾಲ್‌ನಲ್ಲಿ ಇಂದು ನಡೆಯಿತು.

ಇಂದು (ಮಾರ್ಚ್‌ 1) ಮುಂಜಾನೆ 6.30 ಕ್ಕೆ ಸರಿಯಾಗಿ ಈ ತರಬೇತಿ ನಡೆಯಿತು.ಈ ವೇಳೆ ಮಾತನಾಡಿದ ಕಾಲೇಜಿನ ಸ್ವಸ್ಥವೃತ್ತ ವಿಭಾಗದ ಸಹ ಪ್ರಾಧ್ಯಾಪಕಿ ಡಾ| ಶಬಿನಾ ‘ಮಹಿಳೆಯರಿಗೆ ಸಾಕಷ್ಟು ಜವಾಬ್ದಾರಿಗಳಿರುತ್ತವೆ.ಮನೆ ಕೆಲಸದ ಜತೆ ಜತೆಗೆ ಆಫೀಸ್‌ನಲ್ಲೂ ಕೆಲಸ ನಿರ್ವಹಿಸುವ ಮೂಲಕ ಒತ್ತಡದಲ್ಲಿರುತ್ತಾಳೆ. ಹೀಗಾಗಿ ಆಕೆಗೆ ಆರೋಗ್ಯದ ಕಡೆಗೆ ಗಮನ ಕೊಡುವಷ್ಟು ಸಮಯವಿರೋದಿಲ್ಲ.ಪ್ರತಿ ನಿತ್ಯ ಸ್ವಲ್ಪ ಸಮಯವನ್ನು ಯೋಗಕ್ಕಾಗಿ ಮೀಸಲಿಟ್ಟರೆ ಆಕೆಯ ಆರೋಗ್ಯ ಸುಧಾರಣೆಯಾಗಬಲ್ಲದು.ಆದ್ದರಿಂದ ಪ್ರತಿದಿನ ಯೋಗ ಮಾಡುವ ಮೂಲಕ ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಿ” ಎಂದು ಸಲಹೆ ನೀಡಿ ತರಬೇತಿಯನ್ನು ಪ್ರಾರಂಭಿಸಿದರು.

ಈ ವೇಳೆ ವಿವಿಧ ಯೋಗಾಸನಗಳು , ಪ್ರಾಣಾಯಾಮ ಹಾಗೂ ಧ್ಯಾನ ತರಬೇತಿ ನೀಡಲಾಯಿತು.ಬೆಳಗ್ಗೆ6.30ಕ್ಕೆ ಆರಂಭಗೊಂಡ ಯೋಗ ತರಬೇತಿ ಕಾರ್ಯಕ್ರಮ 7.30ಕ್ಕೆ ಮುಕ್ತಾಯಗೊಂಡಿತು. ತರಬೇತಿಯಲ್ಲಿ ಬೆಳ್ಳಂಬೆಳಗ್ಗೆ ಬಹಳ ಹುರುಪಿನಿಂದ ಮಹಿಳೆಯರು ಪಾಲ್ಗೊಂಡರು.ಇನ್ನು ನಾಳೆಯಿಂದ ಮಾರ್ಚ್ 5 ರ ತನಕ ಕೆ.ವಿ.ಜಿ. ಅಯುರ್ವೇದ ಮೆಡಿಕಲ್ ಕಾಲೇಜಿನ ಧನ್ವಂತರಿ ಹಾಲ್ ನಲ್ಲಿ ಯೋಗ ತರಬೇತಿಯು ವಿಶಿಷ್ಟವಾಗಿ ಮೂಡಿಬರಲಿದೆ.

Related posts

ಧರ್ಮಸ್ಥಳಕ್ಕೆ ಪುಸಲಾಯಿಸಿ ಕರೆಯಿಸಿಕೊಂಡಿದ್ದ, ವಿವಿಧ ಕಡೆ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದ ಅಪರಾಧಿಗೆ 10 ವರ್ಷ ಜೈಲು, 2 ವರ್ಷದ ಬಳಿಕ ಸಂತ್ರಸ್ತೆಗೆ ಸಿಕ್ಕಿತು ನ್ಯಾಯ..!

ಸುಳ್ಯದಲ್ಲಿ ನ.26 ರಂದು ಬೃಹತ್ ಉದ್ಯೋಗಮೇಳ , 50ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಭಾಗಿ

ಯುವಕರಲ್ಲಿ ಹೆಚ್ಚುತ್ತಿರುವ ಹೃದಯಾಘಾತಕ್ಕೆ ಸ್ಫೋಟಕ ಕಾರಣ ನೀಡಿದ ಕೇಂದ್ರ ಸರ್ಕಾರ..! ಯುವಕರಲ್ಲಿ Heart Attack ಆಗೋದಕ್ಕೆ ಇದೇ ನೋಡಿ ಪ್ರಮುಖ ಕಾರಣ..!