ನ್ಯೂಸ್ ನಾಟೌಟ್: ಜ್ಯುವೆಲ್ಲರಿ ಅಂಗಡಿ ಮುಂದೆ ವಾಹನ ನಿಲ್ಲಿಸಿದ್ದನ್ನು ಪ್ರಶ್ನಿಸಿದ್ದಕ್ಕೆ ವಕೀಲರೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ರಥಬೀದಿಯಲ್ಲಿ ನಡೆದಿದೆ.
ಸುಳ್ಯದ ರಥ ಬೀದಿಯಲ್ಲಿ ಇರುವ ಜ್ಯುವೆಲ್ಲರಿ ಒಂದರ ಮುಂದೆ ವಕೀಲರೊಬ್ಬರು ಪ್ರತಿ ದಿನ ಕಾರು ನಿಲ್ಲಿಸುತ್ತಿದ್ದರು ಎನ್ನಲಾಗಿದೆ. ಈ ವಿಚಾರವಾಗಿ ಜ್ಯುವೆಲ್ಲರಿಯವರು ಇದನ್ನು ಇಂದು (ಸೋಮವಾರ) ಪ್ರಶ್ನಿಸಿದ್ದಾರೆ. ಜ್ಯುವೆಲ್ಲರಿ ಮುಂದೆ ಕಾರು ನಿಲ್ಲಿಸಿದರೆ ನಮಗೆ ವ್ಯಾಪಾರಕ್ಕೆ ತೊಂದರೆ ಆಗುತ್ತದೆ ಎಂದು ಹೇಳಿದ್ದಾರೆ. ಮಾತಿಗೆ ಮಾತು ಬೆಳೆದು ಇದು ಕೊನೆಗೆ ಪೊಲೀಸ್ ಠಾಣೆವರೆಗೆ ತಲುಪಿದೆ. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಎರಡು ಕಡೆಯವರ ವಾದವನ್ನು ಕೇಳಿದ್ದಾರೆ.
ಇಲ್ಲಿ ನೋ ಪಾರ್ಕಿಂಗ್ ಬೋರ್ಡ್ ಇಲ್ಲ ಹಾಗಾಗಿ ಇಲ್ಲಿ ವಾಹನವನ್ನು ನಿಲ್ಲಿಸಬೇಡಿ ಎಂದು ಹೇಳುವುದಕ್ಕೆ ಆಗುವುದಿಲ್ಲ. ಹಾಗೆಯೇ ಇಲ್ಲಿ ವಾಹನ ನಿಲ್ಲಿಸಿದರೆ ಜ್ಯುವೆಲ್ಲರಿ ಅವರಿಗೆ ವ್ಯಾಪಾರಕ್ಕೂ ತೊಂದರೆ ಆಗುತ್ತದೆ. ಇದನ್ನು ನೀವು ನೀವೇ ಸರಿಪಡಿಸಿಕೊಳ್ಳಬೇಕು. ರಾಜಿಯಲ್ಲಿ ಇತ್ಯರ್ಥಪಡಿಸಿಕೊಳ್ಳಿ ಎಂದು ಪೊಲೀಸರು ಸಲಹೆ ನೀಡಿದ್ದಾರೆ. ಸದ್ಯ ಈ ವಿಚಾರವಾಗಿ ಇತ್ತಂಡಗಳು ಯಥಾಸ್ಥಿತಿಯನ್ನು ಕಾಯ್ದುಕೊಂಡಿರುವುದಾಗಿ ತಿಳಿದು ಬಂದಿದೆ.