ಕ್ರೈಂವೈರಲ್ ನ್ಯೂಸ್ಸುಳ್ಯ

ಸುಳ್ಯ: ಸರ್ಕಾರಿ ಆಸ್ಪತ್ರೆಯ ಆಂಬ್ಯುಲೆನ್ಸ್ ನಿಲ್ಲುವ ಜಾಗದಲ್ಲಿ ಖಾಸಗಿ ವಾಹನ ನಿಲ್ಲಿಸಿದ ಪ್ರಕರಣ, ರಕ್ಷಾ ಸಮಿತಿ ಮನವಿಗೆ ವೈದ್ಯಾಧಿಕಾರಿಗಳ ಸ್ಪಂದನೆ

115

ನ್ಯೂಸ್ ನಾಟೌಟ್: ಸುಳ್ಯ ಸರ್ಕಾರಿ ಆಸ್ಪತ್ರೆಯ ಆಂಬ್ಯುಲೆನ್ಸ್ ನಿಲ್ಲುವ ಜಾಗದಲ್ಲಿ ಖಾಸಗಿ ವಾಹನ ನಿಲ್ಲಿಸಿ ತುರ್ತು ಪರಿಸ್ಥಿತಿಯಲ್ಲಿರುವ ಅನಾರೋಗ್ಯ ಪೀಡಿತರಿಗೆ ಸಮಸ್ಯೆಯನ್ನು ತಂದಿಟ್ಟ ಪ್ರಕರಣವನ್ನು ಇದೀಗ ಗಂಭೀರವಾಗಿ ಪರಿಗಣಿಸಲಾಗಿದೆ.

ಸುಳ್ಯ ಆಂಬ್ಯುಲೆನ್ಸ್ ಚಾಲಕ ಸಂಘದ ಪರ ಧ್ವನಿಯಾಗಿ ನ್ಯೂಸ್ ನಾಟೌಟ್ ಮಾಡಿದ ವರದಿ ಬೆನ್ನಲ್ಲೇ ರಕ್ಷಾ ಸಮಿತಿ ತಂಡದವರು ಆಸ್ಪತ್ರೆಯ ವೈದ್ಯಾಧಿಕಾರಿಯಾದ ಡಾ| ಕರುಣಾಕರ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಕೂಡಲೇ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದರು. ಇದಕ್ಕೆ ಸ್ಪಂದಿಸಿದ ಅವರು ಮುಂದಿನ ದಿನಗಳಲ್ಲಿ ಈ ಕುರಿತಂತೆ ಕ್ರಮ ತೆಗೆದುಕೊಂಡು ಆಗಿರುವ ಸಮಸ್ಯೆಗಳನ್ನು ಬಗೆಹರಿಸುವುದಾಗಿ ತಿಳಿಸಿದರು. ರಾಧಾಕೃಷ್ಣ ಪರಿವಾರಕಾನ, ಶಹೀದ್ ಪಾರೆ ಹಾಗೂ ಅಚ್ಚು ಪ್ರಗತಿ ಮನವಿ ನೀಡಿದ್ದಾರೆ.

See also  ಸಂಪಾಜೆ : ಅಕ್ರಮ ಮರ ಸಾಗಾಟಕ್ಕೆ ಯತ್ನ, ಮರ ಸಮೇತ ಓರ್ವನ ಬಂಧನ
  Ad Widget   Ad Widget   Ad Widget   Ad Widget   Ad Widget   Ad Widget