ಕ್ರೈಂದೇಶ-ಪ್ರಪಂಚದೇಶ-ವಿದೇಶವೈರಲ್ ನ್ಯೂಸ್ಸುಳ್ಯ

ಸುಳ್ಯ: ಮೊಬೈಲ್ ರೀಚಾರ್ಜ್ ಗೆ ಬಂದ ಹಿಂದೂ ಹುಡುಗಿಯ ಫೋಟೋ ಕ್ಲಿಕ್ಕಿಸಿದ ಪ್ರಕರಣ, ಮುಸ್ಲಿಂ ಯುವಕನ ಮೇಲೆ ಬಿತ್ತು ಎರಡು ಕೇಸ್..!

ನ್ಯೂಸ್ ನಾಟೌಟ್ : ಸುಳ್ಯದ ಗಾಂಧೀನಗರದಲ್ಲಿರುವ ಏರ್ ಟೆಲ್ ಮೊಬೈಲ್ ಶಾಪ್ ಗೆ ರೀಚಾರ್ಚ್ ಗೆಂದು ಬಂದ ಅಪ್ರಾಪ್ತ ಹಿಂದೂ ಯುವತಿಯ ಫೋಟೋ ಕ್ಲಿಕ್ಕಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಮುಸ್ಲಿಂ ಯುವಕನ ಮೇಲೆ ಎರಡು ಕೇಸ್ ದಾಖಲಾಗಿದೆ. ಪೋಕ್ಸೊ ಪ್ರಕರಣ ಹಾಗೂ ಮಹಿಳೆಯರಿಗೆ ಕಿರುಕುಳ ನೀಡಿದ ಪ್ರಕರಣದಡಿ ಕೇಸು ದಾಖಲಿಸಲಾಗಿದೆ.

ಯುವತಿ ಅಪ್ರಾಪ್ತೆ ಆಗಿರುವುದರಿಂದ ಪೋಕ್ಸೊ ಪ್ರಕರಣದಡಿ ಕೇಸು ಜಡಿಯಲಾಗಿದೆ. ಸೋಮವಾರ (ಮೇ 6) ಮಧ್ಯಾಹ್ನ ೩ ಗಂಟೆಗೆ ಯುವತಿ ಮೊಬೈಲ್ ರೀಚಾರ್ಜ್ ಗೆಂದು ಸುಳ್ಯದ ಏರ್ ಟೆಲ್ ಆಫೀಸಿಗೆ ಹೋಗಿದ್ದಾಳೆ. ಈ ವೇಳೆ ಆಕೆಗೆ ಗೊತ್ತಾಗದಂತೆ ತನ್ನ ಮೊಬೈಲ್ ನಲ್ಲಿ ಅನ್ಯಕೋಮಿನ ಯುವಕ ಫೋಟೋ ಕ್ಲಿಕ್ಕಿಸಿದ್ದಾನೆ. ಈ ವಿಚಾರ ಗಮನಕ್ಕೆ ಬರುತ್ತಿದ್ದಂತೆ ಆಕೆ ಸ್ಥಳದಲ್ಲೇ ಪ್ರತಿಭಟಿಸಿದ್ದಾಳೆ. ಆತನ ಮೊಬೈಲ್ ಕಸಿದುಕೊಂಡು ಫೋಟೋವನ್ನು ಡಿಲೀಟ್ ಮಾಡಿಸಿದ್ದಾಳೆ. ಮನೆಗೆ ಬಂದವಳು ತನ್ನ ಪೋಷಕರಲ್ಲಿ ತಿಳಿಸಿದ್ದಾಳೆ. ಸಿಟ್ಟಿಗೆದ್ದ ಪೋಷಕರು ನೇರವಾಗಿ ಪೊಲೀಸ್ ಠಾಣೆಯಲ್ಲಿ ಬಂದು ದೂರು ದಾಖಲಿಸಿದ್ದಾರೆ. ಪೊಲೀಸ್ ಠಾಣೆ ಎದುರು ಹಲವಾರು ಹಿಂದೂ ಕಾರ್ಯಕರ್ತರು ಕೂಡ ಜಮಾಯಿಸಿದ್ದರು. ಯುವಕನನ್ನು ಠಾಣೆಗೆ ಕರೆಸಿ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದರು.

Related posts

ಇಸ್ರೇಲ್‌ ಪ್ರಧಾನಿಯಾಗಿ ಅವಕಾಶ ನೀಡುತ್ತೇವೆ: ಮೋದಿಗೆ ಇಸ್ರೇಲ್ ಪ್ರಧಾನಿ ನಫ್ತಾಲಿ ಬೆನ್ನೆಟ್ ಸಪ್ರೈಸ್ ಆಫರ್

ಸುಳ್ಯ: ಶಂಕಿತ ಡೆಂಗ್ಯೂಗೆ ಅತಿಥಿ ಶಿಕ್ಷಕಿ ಬಲಿ, ಹಲವು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರೂ ಬದುಕಲಿಲ್ಲ ಜೀವ..!

ಸುಳ್ಯ: ಪ್ರವೀಣ್ ನೆಟ್ಟಾರ್ ಹತ್ಯೆ ಆರೋಪಿಗಳ ಮನೆಗೆ ಭೇಟಿ ನೀಡಿದ NIA..! ಆರೋಪಿಗಳು ಶರಣಾಗದಿದ್ದರೆ ಆಸ್ತಿ ಮುಟ್ಟುಗೋಲು ಹಾಕುವ ಎಚ್ಚರಿಕೆ!