ಕರಾವಳಿಸುಳ್ಯ

ಸುಳ್ಯ: ಚಿನ್ನದಂಗಡಿಯವರಿಗೆ ಉಂಡೆನಾಮ ತಿಕ್ಕಿ ಕಳ್ಳರು ಎಸ್ಕೇಪ್..! ಅಂಗಡಿ ಮಾಲೀಕರೇ ಅಪರಿಚಿತರ ಬಗ್ಗೆ ಇರಲಿ ನಿಗಾ

ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಸುಳ್ಯದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದೆ. ಕತ್ತಲಲ್ಲಿ ಯಾರೂ ಇಲ್ಲದ ಮನೆಗಳನ್ನು ಟಾರ್ಗೆಟ್ ಮಾಡುತ್ತಿದ್ದ ಕಳ್ಳರು ಈಗ ಗ್ರಾಹಕರ ಸೋಗಿನಲ್ಲಿ ಬಂದೇ ಕಳ್ಳತನ ಮಾಡುವುದಕ್ಕೆ ಶುರು ಮಾಡಿದ್ದಾರೆ.

ನವೆಂಬರ್ 9ರಂದು ಗ್ರಾಹಕರ ಸೋಗಿನಲ್ಲಿ ಬಂದು ಸುಳ್ಯದ ರಥ ಬೀದಿಯಲ್ಲಿರುವ ಚೆನ್ನಕೇಶವ ಸಂಕೀರ್ಣದಲ್ಲಿರುವ ಜ್ಯುವೆಲ್ಲರಿ ಅಂಗಡಿಯಿಂದ ನಯ ನಾಜೂಕಿನಿಂದ ಮಾತನಾಡಿ ಚಿನ್ನದ ಬಳೆಯನ್ನು ಲಪಟಾಯಿಸಿದ್ದಾರೆ. ಈ ದೃಶ್ಯಗಳು ಸಿಸಿಟಿವಿ ಯಲ್ಲಿ ಸೆರೆಯಾಗಿದೆ. ಐದು ಗ್ರಾಂ ತೂಕದ ಬೆಲೆಬಾಳುವ ಮಕ್ಕಳ ಬಳೆಗಳನ್ನು ಕದ್ದಿದ್ದಾರೆ ಎಂದು ತಿಳಿದು ಬಂದಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

https://www.youtube.com/watch?v=hiXNIOfuoIk

Related posts

ಚಿಕ್ಕಮಗಳೂರಿನಲ್ಲಿ ಕಾಲೇಜಿಗೆ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರು ,ಐಡಿ ಮತ್ತು ಸಮವಸ್ತ್ರ ಕಡ್ಡಾಯಗೊಳಿಸಿದ ಆಡಳಿತ ಮಂಡಳಿ

ಸುಳ್ಯದಲ್ಲಿ ಕಾಂಗ್ರೆಸ್ ನಿಂದ ಬೃಹತ್ ರೋಡ್ ಶೋ

17 ವರ್ಷಗಳ ಕಾಲ ಕಾರನ್ನೇ ಮನೆಯಾಗಿಸಿ ಅರಣ್ಯ ವಾಸಿಯಾಗಿರುವ ವ್ಯಕ್ತಿಯನ್ನು ಭೇಟಿಯಾದ ತಹಶೀಲ್ದಾರ್