ಅಡ್ತಲೆ: ಅರಂತೋಡು ಗ್ರಾಮದ ಅಡ್ತಲೆಯ ದೂರದಂಚಿನ ಕಾಡಿನಲ್ಲಿ ಸುಮಾರು 17 ವರ್ಷದಿಂದ ಕಾಡಿನಲ್ಲಿ ವಾಸ ಮಾಡುತ್ತಿದ್ದ ತನ್ನ ಕಾರನ್ನೆ ಮನೆಯಾನ್ನಾಗಿಸಿ ನಾಗರಿಕ ಸಮಾಜವನ್ನು ಧಿಕ್ಕರಿಸಿ ಬದುಕುತ್ತಿರುವ ಅರಂತೋಡು ಗ್ರಾಮ ಅಡ್ತಲೆ ಚಂದ್ರಶೇಖರ ಅವರು ಇರುವ ಸ್ಥಳಕ್ಕೆ ಸುಳ್ಯ ತಾಲ್ಲೂಕು ಕಾರ್ಯನಿರ್ವಾಹಣಾಧಿಕಾರಿ ಭವಾನಿಶಂಕರ್, ಸುಳ್ಯ ತಹಶಿಲ್ದಾರರ್ ಅನಿತಾಲಕ್ಷ್ಮಿ , ಅರ್ .ಐ.ಕೊರಗಪ್ಪ ಹೆಗ್ಡೆ, ಅರಂತೋಡು ಗ್ರಾಮ ಪಂಚಾಯತ್ ಸದಸ್ಯ ಕೇಶವ ಅಡ್ತಲೆ ಭೇಟಿ ನೀಡಿ ಸಮಸ್ಯೆಗಳನ್ನು ಅಲಿಸಿದರು.ಕಾಡಿನಲ್ಲಿ ಯಾವುದೇ ಮೂಲಭೂತ ಸೌಕರ್ಯಗಳು ಇಲ್ಲದೇ ಎಕಾಂಗಿಯಾಗಿದ್ದರೂ ಯಾರ ಸಹಾಯವನ್ನು ಇವರೇಗೆ ಪಡೆದಿಲ್ಲಾ ಕಾಡಿನಲ್ಲಿ ಹರಿಯುವ ನದಿಯಲ್ಲೇ ನಿತ್ಯ ಕರ್ಮಗಳು ನಡೆಯುತ್ತಿದ್ದು ಕಾಡಿನಿಂದ ಸಿಗುವ ಬಳ್ಳಿಯಿಂದ ಬುಟ್ಟಿಯನ್ನು ತಯಾರಿಸಿ ಸ್ಥಳಿಯ ಅಂಗಡಿಗಳಿಗೆ ಮಾರಾಟ ಮಾಡಿ ನಿತ್ಯ ಉಪಯೋಗಿ ಆಹಾರ ಸಾಮಾಗ್ರಿಗಳನ್ನು ಖರೀದಿಸುತ್ತಾರೆ. ಮೃದು ಮನಸ್ಸಿನ ವ್ಯಕ್ತಿ ಇವರು ಅಂದಹಾಗೆ ನಾಗರಿಕ ಸಮಾಜದಿಂದ ದೂರ ಇರಬೇಕೆಂದು ತೀರ್ಮಾನಿಸಿ 17 ವರ್ಷ ಗಳಿಂದ ಕಾಡಿನಲ್ಲೇ ಜೀವನ ನಡೆಸುತ್ತಿದ್ದಾರೆ.