ಕರಾವಳಿ

ಸುಳ್ಯದ ಮರದ ಮಿಲ್ ಮೇಲೆ ಅರಣ್ಯಾಧಿಕಾರಿಗಳ ದಾಳಿ ಅಕ್ರಮ ಮರದ ದಾಸ್ತಾನು ದೂರಿನ ಮೇಲೆ ದಾಳಿ ನಡೆಸಿದ ಅರಣ್ಯಾಧಿಕಾರಿಗಳಿಗೆ ಸಿಕ್ಕಿದ್ದೇನು..?

ನ್ಯೂಸ್ ನಾಟೌಟ್: ಸುಳ್ಯದ ಮರದ ಮಿಲ್ ವೊಂದರ ಮೇಲೆ ಅರಣ್ಯಾಧಿಕಾರಿಗಳು ದಾಳಿ ನಡೆಸಿರುವ ಘಟನೆ ಸೋಮವಾರ ಸಂಜೆ ನಡೆದಿದೆ.

ಹಳೆಗೇಟಿನಲ್ಲಿರುವ ಖಲಿದಿಯಾ ಎಂಬ ಮರದ ಮಿಲ್ ನಲ್ಲಿ ಮರಗಳನ್ನು ಅಕ್ರಮವಾಗಿ ದಾಸ್ತಾನು ಮಾಡಲಾಗಿದೆ ಎಂದು ದೂರು ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಸಮದ್ ಅವರ ಮಿಲ್ ಮೇಲೆ ದಾಳಿ ನಡೆಸಿ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಬಳಿಕ ನ್ಯೂಸ್ ನಾಟೌಟ್ ಜೊತೆಗೆ ಮಾತನಾಡಿದ ಮಾಲೀಕ ಅಬ್ದುಲ್ ಸಮದ್ , ನಮ್ಮಲ್ಲಿ ವಿವಿಧ ದೇವಸ್ಥಾನಗಳಿಗೆ ಹಾಗೂ ದೈವ ಸ್ಥಾನಗಳಿಗೆ ಆರ್ಡರ್ ಆಗಿರುವ ಪೀಠೋಪಕರಣದ ಮರಗಳು ಇವೆ. ಅದಕ್ಕೆ ಅಗತ್ಯವಾಗಿದ್ದ ದಾಖಲಾತಿ ಒದಗಿಸಿದ್ದೇವೆ. ಕೂಲಿ ಕಾರ್ಮಿಕರ ಸಮಸ್ಯೆಯಿಂದ ಮರಗಳು ಇಲ್ಲೆ ಉಳಿದುಕೊಂಡಿದೆ. ಯಾರೋ ಉದ್ದೇಶಪೂರ್ವಕವಾಗಿ ತಪ್ಪು ಮಾಹಿತಿ ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ. ಇದೇ ವೇಳೆ ಮಾತನಾಡಿದ ಅರಣ್ಯಾಧಿಕಾರಿ ಯಶೋಧರವರು ದಾಖಲಾತಿಗಳ ಪರಿಶೀಲನೆ ನಡೆಸಿದ್ದೇವೆ. ಎಲ್ಲ ಸರಿಯಾಗಿದೆ ಎಂದು ತಿಳಿಸಿದರು.

Related posts

ಕೈಯಲ್ಲಿ ಶೂ ಹಿಡಿದು ಪ್ರತಿಜ್ಞೆ ಮಾಡಿದ ಅಣ್ಣಾಮಲೈ…! ಅಣ್ಣಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ವಿರೋಧಿಸಿ ಪ್ರತಿಭಟನೆ

ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗೆ ಆಹ್ವಾನ

ಕಡಬ: ಡೆಂಗ್ಯೂ ಹಾಗೂ ಮಲೇರಿಯಾ ಜ್ವರಕ್ಕೆ ಕೊನೆಯುಸಿರೆಳೆದ ಯುವಕ,31 ವರ್ಷ ಪ್ರಾಯದ ಯುವಕನಿಗೆ ಆಗಿದ್ದೇನು?