ಸುಳ್ಯ

ಸುಳ್ಯ : ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ಲೇಸ್ಮೆಂಟ್ ತರಬೇತಿ, ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ವಿತರಣೆ

ನ್ಯೂಸ್ ನಾಟೌಟ್ : ಸುಳ್ಯ ಕೆ.ವಿ.ಜಿ ಇಂಜಿನಿಯರಿಂಗ್ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಒಂದು ವಾರದ ಪ್ಲೇಸ್ಮೆಂಟ್ ತರಬೇತಿ ಕೊನೇಯ ದಿನ  ಸಮಾರೋಪ ಸಮಾರಂಭ ನಡೆಯಿತು.

ಈ ಕಾರ್ಯಕ್ರಮದ ಕೊನೆಯದಿನವಾದ ಸಭಾಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಕಾಲೇಜಿನ ಕಾರ್ಯನಿರ್ವಹಣಾಧಿಕಾರಿ ಡಾ. ಉಜ್ವಲ್ ಯು.ಜೆ ಮಾತನಾಡಿ ವಿದ್ಯಾರ್ಥಿಗಳು ಎಲ್ಲರೂ ಶ್ರೇಷ್ಠಮಟ್ಟದ ತರಬೇತಿ ಹೊಂದಿ ಕಾರ್ಯಕ್ಷೇತ್ರಕ್ಕೆ ಉನ್ನತ ಸಾಧನೆ ಮಾಡಬೇಕು ಅಲ್ಲದೆ 100 ಪ್ರತಿಶಿತ ಪ್ಲೇಸ್ಮೆಂಟ್ ನಮ್ಮ ಮೊದಲ ಕರ್ತವ್ಯ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರು ಡಾ. ಸುರೇಶ್ ವಿ. ಮಾತನಾಡಿ ವಿದ್ಯಾರ್ಥಿಗಳು ತರಬೇತಿಯಲ್ಲಿ ಮೈಗೂಡಿಸಿಕೊಂಡ ಕೌಶಲ್ಯವನ್ನು ನಿರಂತರವಾಗಿ ಬಳಸಿ ಉನ್ನತ ಹುದ್ದೆಯ ಉದ್ಯೋಗವನ್ನು ಪಡೆಯಬೇಕೆಂದು ತಿಳಿಸಿದರು . ಈ ವೇಳೆ ವಿದ್ಯಾರ್ಥಿಗಳಿಗೆ ಸರ್ಟಿಫಿಕೇಟ್ ವಿತರಣೆ ಮತ್ತು ವಿದ್ಯಾರ್ಥಿಗಳಿಂದ ಅನಿಸಿಕೆ ಅಭಿಪ್ರಾಯ ತಿಳಿಸಿದರು .

ಈ ಸಂದರ್ಭದಲ್ಲಿ ‘7 th sense solution’ ತರಬೇತುದಾರ ಪ್ರದೀಪ್, ವಿದ್ಯಾ , ಶ್ವೇತ , ಕಾಲೇಜಿನ ಟ್ರೈನಿಂಗ್ & ಪ್ಲೇಸ್‌ಮೆಂಟ್ ಆಫೀಸರ್ ಪ್ರೊಫೆಸರ್ ಅನಿಲ್ ಬಿ.ವಿ , ಪ್ರೊ. ರೇಖಾ ಎ.ಎ, ಪ್ರೊ. ಅಪೂರ್ವ ಬಿ , ಪ್ರೊ.ಸತ್ಯಜಿತ್, ಪ್ರೊ.ಸಿಂಧು ಡಾ. ಭಾಗ್ಯ ಹೆಚ್.ಕೆ , ಉಪಸ್ಥಿತರಿದ್ದರು.

Related posts

ಗುತ್ತಿಗಾರಿನ ಯಾಸಿಕ ಎಂ.ಆರ್. ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ,ಲಾಂಗ್ ಜಂಪ್ ವಿಭಾಗದಲ್ಲಿ ಯುಕ್ತಿ.ಕೆ. ವಿದ್ಯಾರ್ಥಿನಿಯ ಸಾಧನೆ

ಅವಘಡಕ್ಕೆ ತುತ್ತಾಗಿ ದವಡೆ ತುಂಡರಿಸ್ಪಟ್ಟ ಅನಾಥ ಶ್ವಾನಕ್ಕೆ KVG ಆಂಬ್ಯುಲೆನ್ಸ್ ಚಾಲಕನ ಆಸರೆ, ಪ್ರಶಾಂತ್ ನಿಷ್ಕಲ್ಮಶ ಕಾರ್ಯಕ್ಕೆ ಭಾರೀ ಮೆಚ್ಚುಗೆ, ಇಲ್ಲಿದೆ ನೋಡಿ ಸಂಪೂರ್ಣ ವಿಡಿಯೋ

ಸಂಪಾಜೆ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಸ್ವಾತಂತ್ರ್ಯೋತ್ಸವ, ಧ್ವಜ ಹಾರಿಸಿ ಸಂಭ್ರಮಿಸಿದ ಊರ ಮಂದಿ