Latestಕೆವಿಜಿ ಕ್ಯಾಂಪಸ್‌

ಸುಳ್ಯ: ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಆಯುರ್ವೇದ ಪದವಿ ವಿಭಾಗದ ಅಧ್ಯಯನ ಮಂಡಳಿಯ ನೂತನ ಚೇರ್ ಮೆನ್ ಆಗಿ ಡಾ. ಲೀಲಾಧರ್ ಡಿ. ವಿ. ನೇಮಕ

517

ನ್ಯೂಸ್ ನಾಟೌಟ್ : ಸುಳ್ಯದ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಡಾ. ಲೀಲಾಧರ್ ಡಿ. ವಿ. ಅವರನ್ನು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಕರ್ನಾಟಕ, ಬೆಂಗಳೂರು ಇದರ ಆಯುರ್ವೇದ ಪದವಿ ವಿಭಾಗದ ಅಧ್ಯಯನ ಮಂಡಳಿಗೆ ಚೇರ್ ಮೆನ್ ಆಗಿ ನೇಮಕಗೊಂಡಿದ್ದಾರೆ.

ಆರ್ ಜಿಯುಎಚ್ಎಸ್  ಉಪಕುಲಪತಿಗಳಾದ ಡಾ. ಭಗವಾನ್ ಬಿ ಸಿ ಅವರ ಅನುಮೋದನೆಯ ಮೇರೆಗೆ ವಿಶ್ವವಿದ್ಯಾಲಯದ ಕುಲಸಚಿವ ಶಿವಪ್ರಸಾದ್ ಪಿ. ಆರ್. ಅವರು ಗುರುವಾರ (ಮಾರ್ಚ್ 27ರಂದು) ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದಲ್ಲಿ ಆದೇಶ ಪತ್ರ ನೀಡಿ ಅಭಿನಂದಿಸಿದ್ದಾರೆ.

ಈ ಆದೇಶ ಪತ್ರ 14 ಜನ ಆಂತರಿಕ ಸದಸ್ಯರು ಹಾಗೂ ಎರಡು ಜನ ಬಾಹ್ಯ ಸದಸ್ಯರನ್ನೊಳಗೊಂಡ ಸಮಿತಿಯಾಗಿದ್ದು, ಡಾ. ಲೀಲಾಧರ ಡಿ. ವಿ., ಅವರು ಚೇರ್ ಮೆನ್ ಆಗಿ ಕರ್ತವ್ಯ ನಿರ್ವಹಿಸಲ್ಲಿದ್ದಾರೆ.

ಕಾಲೇಜಿನ ಪ್ರಾಂಶುಪಾಲ ಡಾ. ಲೀಲಾಧರ್ ಡಿ. ವಿ., ಅವರನ್ನು ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ (ರಿ) ಸುಳ್ಯ ಇದರ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ, ಪ್ರಧಾನ ಕಾರ್ಯದರ್ಶಿ ಆರ್ಕಿಟೆಕ್ಟ್ ಅಕ್ಷಯ್ ಕೆ. ಸಿ., ಉಪಾಧ್ಯಕ್ಷೆ ಶೋಭಾ ಚಿದಾನಂದ, ಜೊತೆ ಕಾರ್ಯದರ್ಶಿಗಳಾದ ಡಾ. ಐಶ್ವರ್ಯ ಕೆ. ಸಿ., ಕೆ. ವಿ. ಹೇಮನಾಥ್, ಖಜಾಂಚಿ ಡಾ. ಗೌತಮ್ ಗೌಡ ಹಾಗೂ ಕೌನ್ಸಿಲ್ ಸದಸ್ಯರಾದ ಜಗದೀಶ್ ಅಡ್ತಲೆ, ಮೀನಾಕ್ಷಿ ಹೇಮನಾಥ್, ಧನಂಜಯ ಮದುವೆಗದ್ದೆ ಹಾಗೂ ಸಂಸ್ಥೆಯ ಬೋಧಕ ಬೋಧಕೇತರ ಸಿಬ್ಬಂದಿ ಅಭಿನಂದಿಸಿದ್ದಾರೆ.

See also  ಕೊಡಗು ಜಿಲ್ಲೆಯ ಶಾಲಾ ಕಾಲೇಜಿಗೆ ಇಂದು (ಜೂ.17) ರಜೆ, ಜಿಲ್ಲಾಧಿಕಾರಿ ಘೋಷಣೆ
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget