ಕರಾವಳಿ

ಯುವ ವೈದ್ಯೆ ಮೇಲಿನ ಅತ್ಯಾಚಾರ-ಕೊಲೆ ವಿರುದ್ಧ ಸಿಡಿದೆದ್ದ ಸುಳ್ಯದ ಭಾರತೀಯ ವೈದ್ಯಕೀಯ ಸಂಘ, ಸುಳ್ಯ ತಾಲೂಕು ಕಚೇರಿಯಲ್ಲಿ ಮನವಿ ಸಲ್ಲಿಸಿ ಕಠಿಣ ಕ್ರಮಕ್ಕೆ ಆಗ್ರಹ

ನ್ಯೂಸ್ ನಾಟೌಟ್: ಕೋಲ್ಕತಾದಲ್ಲಿ ಯುವ ವೈದ್ಯೆಯನ್ನು ಭೀಕರವಾಗಿ ಅತ್ಯಾಚಾರಗೈದು ಕೊಲೆ ಮಾಡಿರುವ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಈ ಸಂಬಂಧಪಟ್ಟಂತೆ ದೇಶಾದ್ಯಂತ ಭಾರತೀಯ ವೈದ್ಯರ ಸಂಘ ಪ್ರತಿಭಟನೆ ನಡೆಸುತ್ತಿದೆ. ಅಂತೆಯೇ ಸುಳ್ಯದ ತಾಲೂಕು ಕಚೇರಿ ಎದುರು ಕೂಡ ವೈದ್ಯರು ಪ್ರತಿಭಟನೆ ನಡೆಸಿದರು. ಆದಷ್ಟು ಬೇಗ ಆರೋಪಿಗಳನ್ನ ಬಂಧಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.

ಭಾರತೀಯ ವೈದ್ಯಕೀಯ ಸಂಘ ಸುಳ್ಯದ ಅಧ್ಯಕ್ಷೆ ಡಾ| ವೀಣಾ, ಗೌರವ ಕಾರ್ಯದರ್ಶಿ ಡಾ| ರವಿಕಾಂತ್ , ಐಎಂಎ ಮತ್ತು ಎಎಂಎಸ್ ಕರ್ನಾಟಕ ಸ್ಟೇಟ್ ಚಾಪ್ಟರ್ ಮುಖ್ಯಸ್ಥೆ ಡಾ| ಗೀತಾ ದೊಪ್ಪ, ಡಾ| ರವಿಶಂಕರ್, ಡಾ| ವಿ.ಎಸ್ ಪಾರೆ, ಡಾ| ಹಿಮಕರ, ಡಾ| ಕರುಣಾಕರ, ಡಾ| ಅರ್ಚನಾ, ಡಾ| ಸೌಮ್ಯ, ಡಾ. ಸಾಯಿಗೀತಾ, ಡಾ| ನವ್ಯ, ಡಾ| ರಂಗನಾಥ್, ಡಾ| ಭವ್ಯ, ಡಾ| ಹಸ್ರೀನಾ, ಡಾ| ಬೋರ್ಕರ್, ಡಾ| ರೋಶನ್, ಡಾ| ಗಣೇಶ್ ಶರ್ಮ, ಡಾ| ವೆಂಕಟಕೃಷ್ಣ ಭಟ್ ಹಾಜರಿದ್ದರು.

Related posts

ಅಡಿಕೆ ತೋಟಗಳಿಗೆ ನುಗ್ಗಿದ ನೇತ್ರಾವತಿ ನದಿ ನೀರು..! 6 ಕುಟುಂಬಗಳ ಸ್ಥಳಾಂತರ..!

ಮತ್ತೊಮ್ಮೆ ಗಡಗಡ ಕಂಪಿಸಿದ ಕೊಡಗು -ಸಂಪಾಜೆ- ಸುಳ್ಯ ತಾಲೂಕು..!

ಮಾನವೀಯ ನೆಲೆಯಲ್ಲಿ ಪ್ರವೀಣ್‌ ನೆಟ್ಟಾರು ಪತ್ನಿ ನೌಕರಿಗೆ ಮರು ನೇಮಕ: ಸಿಎಂ ಸಿದ್ದರಾಮಯ್ಯ