Uncategorized

ಸುಳ್ಯ ತಾಲೂಕಿನಲ್ಲಿ ಜಾನುವಾರುಗಳಿಗೆ ಚರ್ಮ ಗಂಟು ರೋಗ

ನ್ಯೂಸ್ ನಾಟೌಟ್ : ಸುಳ್ಯ ತಾಲೂಕಿನ ಕೆಲವು ಕಡೆ ಜಾನುವಾರುಗಳಿಗೆ ಚರ್ಮ ರೋಗ ಇರುವುದು ಪತ್ತೆಯಾಗಿದೆ. ಇದರಿಂದ ಹೈನುಗಾರಿಕೆಯನ್ನೇ ನಂಬಿರುವ ಜನರು ಆತಂಕಕ್ಕೆ ಒಳಗೊಂಡಿದ್ದಾರೆ. ಮುಂದಿನ ಆದೇಶದವರೆಗೆ ಜಾನುವಾರಗಳನ್ನು ಮೇಯಲು ಬಿಡಬಾರದು ಎಂದು ವೈದ್ಯಾಧಿಕಾರಿ ಡಾ .ನಿತಿನ್ ಪ್ರಭು ಸಲಹೆ ನೀಡಿದ್ದಾರೆ.

ಸುಳ್ಯ ತಾಲೂಕಿನ ಆಲೆಟ್ಟಿ ,ಅಜ್ವಾವಾರ, ಉಬರಡ್ಕ ಮಿತ್ತೂರು, ಕನಕಮಜಲು, ಕುಕ್ಕುಜಡ್ಕ ಗ್ರಾಮದಲ್ಲಿ ಜಾನುವಾರುಗಳಿಗೆ ಚರ್ಮ ಗಂಟು ರೋಗ ಇರುವುದುದು ಪತ್ತೆಯಾಗಿದೆ. ಈ ವರದಿಯ ಪ್ರಕಾರ ಸುಳ್ಯ ಪಶುಸಂಗೋಪನಾ ಇಲಾಖೆಯ ವೈದ್ಯಾಧಿಕಾರಿ ಡಾ .ನಿತಿನ್ ಪ್ರಭು ನಿತಿನ್ ಮನೆ ಮನೆಗೆ ಭೇಟಿ ನೀಡಿದ್ದಾರೆ. ಜಾನುವಾರುಗಳ ಮಾದರಿ ಪರೀಕ್ಷೆಯನ್ನು ರಿಪೋರ್ಟ್ ಗೆ ಕಳುಹಿಸಲಾಗಿದೆ. ಜಿಲ್ಲಾಧಿಕಾರಿಯ ಸೂಚನೆಯವರೆಗೆ ಜಾನುವಾರುಗಳನ್ನು ಸಾಗಾಟ ಮಾಡಬಾರದು. ಮನೆಯಿಂದ ಜಾನುವಾರುಗಳನ್ನು ಹೊರಗೆ ಬಿಡಬಾರದು. ಮನೆಯಲ್ಲಿಯೇ ಕಟ್ಟಿ ಹಾಕಬೇಕೆಂದು ವಿನಂತಿಸಿಕೊಂಡಿದ್ದಾರೆ. ಜಾನುವಾರುಗಳಿಗೆ ಚರ್ಮ ರೋಗದ ಕುರಿತು ಸಂಶಯ ಇದ್ದರೆ ಸುಳ್ಯ ಪಶುಸಂಗೋಪನಾ ಇಲಾಖೆಯನ್ನು ತಕ್ಷಣವೇ ಸಂಪರ್ಕಿಸಬೇಕೆಂದು ತಿಳಿಸಿದ್ದಾರೆ.

Related posts

ಉಪ್ಪಿನಂಗಡಿ: ಶನಿವಾರ ವೈದ್ಯರಿಗೆ ರಜೆಯಿದೆ,ಮೂರು ದಿನ ಬಿಟ್ಟು ಬನ್ನಿ..!;ಜ್ವರದಿಂದ ಬಳಲುತ್ತಿದ್ದ ರೋಗಿಗಳಿಗೆ ಆಸ್ಪತ್ರೆಯಲ್ಲಿ ಈ ರೀತಿ ಹೇಳಿದ್ಯಾಕೆ ?

ಪಾಕ್ ನಲ್ಲಿ ತೀವ್ರ ಆಹಾರ ಬಿಕ್ಕಟ್ಟು: ಆಹಾರ ಧಾನ್ಯ ವಿತರಣೆಯಲ್ಲಿ ನೂಕು-ನುಗ್ಗಲು, ಜನರನ್ನು ಚರಂಡಿಗೆ ತಳ್ಳಿದ ವ್ಯಕ್ತಿ! ವಿಡಿಯೋ ವೈರಲ್

ಮುಸ್ಲಿಮರ ವ್ಯಾಪಾರಕ್ಕೆ ನಿರ್ಬಂಧ ವಿಧಿಸುವವರ ವಿರುದ್ಧ ಕ್ರಮ