ನ್ಯೂಸ್ ನಾಟೌಟ್: ಕಾರು ಮತ್ತು ಟೆಂಪೋ ಟ್ರಾವೆಲರ್ ನಡುವೆ ಅಪಘಾತವಾಗಿದ್ದು,ಕಾರು ಚಾಲಕನಿಗೆ ಗಾಯವಾಗಿರುವ ಘಟನೆ ಸುಳ್ಯದ ಓಡಾಬಾಯಿ ಎಂಬಲ್ಲಿ ನಡೆದಿದೆ.
ಟೆಂಪೋ ಟ್ರಾವೆಲರ್ ಐವರ್ನಾಡಿನಿಂದ ಸುಳ್ಯಕ್ಕೆ ಬರುತ್ತಿದ್ದು,ಕಾರು ಸುಳ್ಯದಿಂದ ಪುತ್ತೂರಿಗೆ ಪ್ರಯಾಣಿಸುತ್ತಿತ್ತು ಎಂದು ಹೇಳಲಾಗಿದೆ.ಗಾಯಾಳುವನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.