ಕರಾವಳಿಸುಳ್ಯ

ಸುಳ್ಯ:ಬೈಕ್ – ಕಾರು ಮಧ್ಯೆ ಭೀಕರ ಅಪಘಾತ,ಓರ್ವ ಸ್ಥಳದಲ್ಲೇ ಮೃತ್ಯು,ಮತ್ತೋರ್ವ ಗಂಭೀರ

ನ್ಯೂಸ್ ನಾಟೌಟ್ : ಬೈಕ್‌ ಮತ್ತು ಕಾರು ನಡುವೆ ಭೀಕರ ಅಪಘಾತ ಸಂಭವಿಸಿದ ಘಟನೆ ಸುಳ್ಯ ಸಮೀಪದ ಪಾಲಡ್ಕ ಬಳಿ ನಡೆದಿದೆ.ಪರಿಣಾಮ ಬೈಕ್‌ ಸವಾರ ಸ್ಥಳದಲ್ಲೆ ಮೃತಪಟ್ಟಿದ್ದಾನೆ.

ಸುಳ್ಯ ಕೆವಿಜಿ ಆಯುರ್ವೇದ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಸಂಭ್ರಮ್‌ ಮತ್ತು ಸ್ವರೂಪ್‌ ಸುಳ್ಯ ಕಡೆಯಿಂದ ಸಂಪಾಜೆ ಕಡೆಗೆ ಬೈಕ್‌ ನಲ್ಲಿ ತೆರಳುತ್ತಿದ್ದರು. ಪೆರಾಜೆ ಕಡೆಯಿಂದ ಸುಳ್ಯ ಕಡೆಗೆ ಕಾರು ಬರುತ್ತಿತ್ತು. ಪಾಲಡ್ಕದಲ್ಲಿ ಪರಸ್ಪರ ಗುದ್ದಿದ ಪರಿಣಾಮವಾಗಿ ಕೆವಿಜಿ ಆಯುರ್ವೇದ ಕಾಲೇಜಿನ ಮೂರನೇ ವರ್ಷದ ವಿದ್ಯಾರ್ಥಿ ಚಿಕ್ಕಬಳ್ಳಾಪುರದ ಸ್ವರೂಪ್‌ ಎಂಬವರು ಸ್ಥಳದಲ್ಲೇ ಮೃತಪಟ್ಟರು. ಇನ್ನೋರ್ವ ಸವಾರ ಸಂಭ್ರಮ್‌ ಎಂಬವರಿಗೆ ಗಾಯವಾಗಿದ್ದು ಸುಳ್ಯ ಸರಕಾರಿ ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

Related posts

ಮಂಗಳೂರು:ಗಾಂಜಾ ಮಾರಾಟ ಪ್ರಕರಣ :ವೈದ್ಯ ವಿದ್ಯಾರ್ಥಿ ಸಹಿತ ಮತ್ತೆ ಮೂವರ ಬಂಧನ

ಸುಳ್ಯ: ಎನ್‌ಎಂಸಿ ಪದವಿ, ಪದವಿ ಪೂರ್ವ ಕಾಲೇಜಿಗೆ ನೂತನ ಆಡಳಿತಾಧಿಕಾರಿ ನೇಮಕ, ಚಂದ್ರಶೇಖರ ಪೇರಾಲುಗೆ ಹೊಸ ಜವಾಬ್ದಾರಿ

ಸೋನು ಗೌಡನನ್ನು ಭೇಟಿ ಮಾಡಿದ ಬಿಗ್ ಬಾಸ್‌ ಸ್ಪರ್ಧಿ,ಜೈಲಿಗೆ ಭೇಟಿ ನೀಡಿ ಸೋನುಗೆ ರಾಕೇಶ್‌ ಅಡಿಗ ಹೇಳಿದ್ದೇನು?