ಕರಾವಳಿಸುಳ್ಯ

ಕುಂದಾಪುರದಲ್ಲಿ ಸ್ನಾನಕ್ಕೆಂದು ನದಿಗೆ ಇಳಿದ ಸುಳ್ಯದ ಯುವಕ ನಾಪತ್ತೆ, ರಭಸದಿಂದ ಹರಿಯುತ್ತಿದ್ದ ನದಿಗೆ ಸಿಲುಕಿ ಕಣ್ಮರೆ, ತೀವ್ರ ಶೋಧ

ನ್ಯೂಸ್ ನಾಟೌಟ್ : ಸುಳ್ಯದ ಯುವಕನೊಬ್ಬ ಸ್ನಾನಕ್ಕೆಂದು ನದಿಗೆ ಇಳಿದು ನಾಪತ್ತೆಯಾಗಿರುವ ಘಟನೆ ಕುಂದಾಪುರ ತಾಲೂಕಿನ ಬಿದ್ಕಲ್ ಕಟ್ಟೆ ಸಮೀಪದ ಸೌಡ ಎಂಬಲ್ಲಿ ನಡೆದಿದೆ.ಐವರ್ನಾಡು ಗ್ರಾಮದ ಮಡ್ತಿಲ ಮೀರನಾಥ್ ಗೌಡ ಎಂಬುವರ ಮಗ ಸುಹಾಸ್ಂ.ಎಂ. (21) ಎಂದು ಗುರುತಿಸಲಾಗಿದೆ. ಶುಕ್ರವಾರ ಮಧ್ಯಾಹ್ನ ಹೊಳೆಗೆ ಸ್ನೇಹಿತರೊಂದಿಗೆ ಸ್ನಾನಕ್ಕೆಂದು ತೆರಳಿದಾಗ ದುರ್ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ಸುಹಾಸ್ ಮೂಡಬಿದ್ರೆಯ ಆಯುರ್ವೇದ ಔಷಧಿ ಕಂಪೆನಿಯೊಂದರ ಮೆಡಿಕಲ್ ರೆಪ್ ಆಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಶುಕ್ರವಾರ ಬೆಳಿಗ್ಗೆಯಷ್ಟೇ ತನ್ನ ಮನೆಯಾದ ಐವರ್ನಾಡಿನ ಮಡ್ತಿಲದಿಂದ ಮೂಡಬಿದ್ರೆಗೆ ಬಂದಿದ್ದರು. ಅಲ್ಲಿಂದ ಸ್ನೇಹಿತರೊಂದಿಗೆ ಸೌಡ ಹೊಳೆಗೆ ಸ್ನಾನಕ್ಕೆಂದು ತೆರಳಿದ್ದರು ಎಂದು ತಿಳಿದು ಬಂದಿದೆ. ಸೌಡ ಸಮೀಪದ ಹೊಳೆಯಲ್ಲಿ ನೀರಿಗಿಳಿದ ಸುಹಾಸ್ ಆಕಸ್ಮಿಕವಾಗಿ ಹೊಳೆಯಲ್ಲಿ ಕೊಚ್ಚಿ ಹೋಗಿದ್ದಾರೆ ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ಹಾಗೂ ಮುಳುಗು ತಜ್ಞರು ಧಾವಿಸಿ, ಸುಹಾಸನನ್ನು ಹುಡುಕುವ ಪ್ರಯತ್ನ ನಡೆಸಲಾಗುತ್ತಿದೆ. ಕೋಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹೊಳೆಯಲ್ಲಿ ಭಾರೀ ಹರಿವು ಇರುವುದರಿಂದ ಸುಹಾಸ್ ದೇಹ ಹೊಳೆಯಿಂದ ಹರಿದು ಸಮುದ್ರ ಸೇರುವ ಸಾಧ್ಯತೆ ಹೆಚ್ಚಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.

Related posts

ಮಂಗಳೂರು: ಪಕ್ಕದ ಮನೆಯ ಸ್ನಾನ ಗೃಹದ ಗೋಡೆಯಲ್ಲಿ ಮೊಬೈಲ್ ಇಟ್ಟ ಯುವಕ! ಯುವತಿಯ ಬದಲಾಗಿ ಆಕೆಯ ಅಣ್ಣ ಬಚ್ಚಲು ಮನೆಗೆ ಬಂದಿದ್ದ..! ಮುಂದೇನಾಯ್ತು?

ಗೋಕರ್ಣದಲ್ಲಿ ಕುಮಾರಸ್ವಾಮಿಗೆ ಬಿಸಿಮುಟ್ಟಿಸಿದ ಅರ್ಚಕರು !

ಸುಳ್ಯ: ನೆಹರೂ ಮೆಮೋರಿಯಲ್ ಕಾಲೇಜಿಗೆ ಶೇ. 94.55 ಫಲಿತಾಂಶ, ಮಂಗಳೂರು ವಿವಿ ಪದವಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ