ಕರಾವಳಿಸುಳ್ಯ

ಸುಳ್ಯ:ಬಿಳಿಯಾರಿಯಲ್ಲಿ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆಗೆ ಶರಣು

ನ್ಯೂಸ್ ನಾಟೌಟ್ :ವ್ಯಕ್ತಿಯೋರ್ವರು ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ವರದಿಯಾಗಿದೆ. ಸುಳ್ಯದ ಅರಂತೋಡು ಗ್ರಾಮದ ಬಿಳಿಯಾರಿನ ಗೋಪಾಲ ಗೌಡ ಮೃತ ದುರ್ದೈವಿ.

ಗೋಪಾಲ ಗೌಡರು ತಮ್ಮ ಮನೆಯ ಸಮೀಪದಲ್ಲಿರುವ ಹಳೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿದು ಬಂದಿದೆ.ಇಂದು ಬೆಳಗ್ಗಿನ ಜಾವ ಮನೆಯವರು ಎದ್ದು ನೋಡಿದಾಗ ಗೋಪಾಲ ಗೌಡರು ಮನೆಯಲ್ಲಿ ಇಲ್ಲದಿರುವುದನ್ನು ಕಂಡು ಹುಡುಕಾಡಿದರು.ಆಗ ತಮ್ಮ ಹಳೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.ರಾತ್ರಿ ವೇಳೆ ಎಲ್ಲರೂ ಮಲಗಿರುವ ವೇಳೆ ಈ ಕೃತ್ಯ ನಡೆಸಿರಬಹುದು ಎಂದು ಅಂದಾಜಿಸಲಾಗಿದೆ.ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆಂದು ತಿಳಿದು ಬಂದಿದೆ.ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Related posts

ವಿಶೇಷ ಚೇತನ ಮಹಿಳೆ ಮನೆಗೆ ನುಗ್ಗಿ 65 ವರ್ಷದ ವೃದ್ದನಿಂದ ಅತ್ಯಾಚಾರ,ಆರೋಪಿ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿಸಿದ ಪೊಲೀಸರು

ನಾಳೆ ಸಂಪಾಜೆ ಗ್ರಾಮ ಪಂಚಾಯತ್‌ಗೆ ಡಾ ಶಿವರಾಮ ಕಾರಂತ ಪ್ರಶಸ್ತಿ ಪ್ರದಾನ

ಅಜ್ಜಾವರ ಸರ್ಕಾರಿ ಶಾಲೆಗೆ ಹೊಸ ಕಾಯಕಲ್ಪ..! ನ್ಯೂಸ್ ನಾಟೌಟ್ ವರದಿ ಬೆನ್ನಲ್ಲೇ 7 ಲಕ್ಷ ರೂ. ಅನುದಾನ ಮಂಜೂರು