ಕರಾವಳಿ

ಸುಳ್ಯ: ಬೈಕ್ ಗೆ ಗುದ್ದಿದ ಕಾರು, ಬೈಕ್ ಸವಾರನಿಗೆ ಗಾಯ, ಆಸ್ಪತ್ರೆಗೆ ದಾಖಲು

ನ್ಯೂಸ್ ನಾಟೌಟ್: ಸುಳ್ಯದಲ್ಲಿ ಕಾರೊಂದು ಬೈಕ್ ಗೆ ಗುದ್ದಿದ ಪರಿಣಾಮ ಬೈಕ್ ಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಭಾನುವಾರ ರಾತ್ರಿ ನಡೆದಿದೆ.

ಸುಬ್ರಹ್ಮಣ್ಯದಿಂದ ಬರುತ್ತಿದ್ದ ಕಾರು ಮಡಿಕೇರಿಯತ್ತ ತೆರಳುತ್ತಿದ್ದ ವೇಳೆ ಜ್ಯೋತಿ ಸರ್ಕಲ್ ಬಳಿ ಫೆಡರಲ್ ಬ್ಯಾಂಕ್ ಮುಂಭಾಗ ಪೈಚಾರ್ ಕಡೆಗೆ ಹೋಗುತ್ತಿದ್ದ ಬೈಕ್ ಗೆ ಗುದ್ದಿದೆ. ಡಿಕ್ಕಿ ರಭಸಕ್ಕೆ ರಸ್ತೆಗೆ ಎಸೆಯಲ್ಪಟ್ಟು ಬೀರಮಂಗಲ ನಿವಾಸಿ ಅನಿಲ್ ಎಂಬುವವರು ಗಾಯಗೊಂಡಿದ್ದಾರೆ. ಬೈಕ್ ಸವಾರನನ್ನು ಕೆವಿಜಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

Related posts

ಮಡಿಕೇರಿ: ಬೈಕ್‌ಗಳೆರಡರ ನಡುವೆ ಭೀಕರ ಅಪಘಾತ,ಸವಾರರಿಗೆ ಗಂಭೀರ ಗಾಯ

ಪುತ್ತೂರು: ಅಂಗನವಾಡಿಗೆ ನುಗ್ಗಿ ಆಮ್ಲೆಟ್‌ ಮಾಡಿ ತಿಂದ ಕಳ್ಳರು.. ! ಟಾಯ್ಲೆಟ್‌ ಬೇಸಿನ್‌ಗೆ ಮಣ್ಣು ತುಂಬಿಸಿ ಕುಕೃತ್ಯ..!

ಪುತ್ತೂರು: ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿಗೆ ಸಂತೋಷ್ ನಿರ್ದೇಶಕರಾಗಿ ಆಯ್ಕೆ