ಸುಳ್ಯ

ಸುಳ್ಯ: ಸಹಾಯಕ ಕೃಷಿ ನಿರ್ದೇಶಕರಾಗಿ ಯಶಸ್ ಮಂಜುನಾಥ್ ಅಧಿಕಾರ ಸ್ವೀಕಾರ

ನ್ಯೂಸ್ ನಾಟೌಟ್: ಸುಳ್ಯದಲ್ಲಿ ಕಳೆದೊಂದು ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿದ್ದ ಕೃಷಿ ಅಧಿಕಾರಿ ಹಾಗೂ ಪ್ರಭಾರ ಸಹಾಯಕ ಕೃಷಿ ನಿರ್ದೇಶಕ ನಾಗರಾಜ್ ವರ್ಗಾವಣೆಗೊಂಡಿದ್ದು, ನೂತನ ಸಹಾಯಕ ನಿರ್ದೇಶಕರಾಗಿ ಯಶಸ್ ಮಂಜುನಾಥ್ ಸೋಮವಾರ ಅಧಿಕಾರ ಸ್ವೀಕರಿಸಿದರು.

ಪ್ರಸ್ತುತ ಕಾರ್ಯನಿರ್ವಹಿಸುತ್ತಿದ್ದ ನಾಗರಾಜ್ ಬನ್ನಿ ಹಟ್ಟಿ ಅವರು ನೂತನ ಸಹಾಯಕ ನಿರ್ದೇಶಕರಿಗೆ ಅಧಿಕಾರ ಹಸ್ತಾಂತರಿಸಿದರು. ನಾಗರಾಜ್ ಅವರಿಗೆ ಹಾವೇರಿಯ ಕಾಗಿನೆಲೆ ರೈತ ಸಂಪರ್ಕ ಕೇಂದ್ರಕ್ಕೆ ವರ್ಗಾವಣೆಯಾಗಿದೆ. ಸದ್ಯ ಸುಳ್ಯದ ಕೃಷಿ ಇಲಾಖೆಗೆ ಇಂಚಾರ್ಜ್ ಆಗಿ ಎಸ್ ಎಸ್ ಮಂಜುನಾಥ್ ಅವರನ್ನು ನೇಮಿಸಿ ಆದೇಶ ಹೊರಡಿಸಲಾಗಿತ್ತು. ಅಧಿಕಾರ ಹಸ್ತಾಂತರ ಸಂದರ್ಭ ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.

Related posts

ಕೆ.ವಿ.ಜಿ.ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ “ಕರ್ನಾಟಕ ಸುವರ್ಣ ಸಂಭ್ರಮ”, ವಿದ್ಯಾರ್ಥಿಗಳಿಂದ ಕನ್ನಡ ಗೀತ ಗಾಯನ ಹಾಗೂ ಭಾಷಣ

ಸುಳ್ಯ: ಡಾ. ಕೆ.ವಿ ಚಿದಾನಂದ ಮತ್ತು ಮನೆಯವರಿಂದ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಗೆ ಶ್ರೀಚೆನ್ನಕೇಶವ ದೇವಸ್ಥಾನದ ಬ್ರಹ್ಮರಥ ಸಮರ್ಪಣಾ ಕಾರ್ಯಕ್ರಮದ ಆಹ್ವಾನ, ಆಮಂತ್ರಣ ಪತ್ರಿಕೆ ನೀಡಿ ಆಶೀರ್ವಾದ ಪಡೆದುಕೊಂಡ ಕುರುಂಜಿ ಕುಟುಂಬ

ಸುಳ್ಯ: ಸರ್ಕಾರಿ ಆಸ್ಪತ್ರೆಯ ಆಂಬ್ಯುಲೆನ್ಸ್ ನಿಲ್ಲುವ ಜಾಗದಲ್ಲಿ ಖಾಸಗಿ ವಾಹನ ನಿಲ್ಲಿಸಿದ ಪ್ರಕರಣ, ರಕ್ಷಾ ಸಮಿತಿ ಮನವಿಗೆ ವೈದ್ಯಾಧಿಕಾರಿಗಳ ಸ್ಪಂದನೆ