ಕರಾವಳಿಸುಳ್ಯ

ಸುಳ್ಯ: ತಡರಾತ್ರಿ ಆಂಬ್ಯುಲೆನ್ಸ್ ಗೆ ಅಡ್ಡ ಬಂದ ಕಾಡುಕೋಣ, ಚಾಲಕನ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಸಿಕ್ಕಿದ್ದೇಗೆ..?

ನ್ಯೂಸ್ ನಾಟೌಟ್: ಸುಳ್ಯದ ಕುಕ್ಕಂದೂರು ಬಳಿ ಆಂಬ್ಯುಲೆನ್ಸ್ ಗೆ ತಡರಾತ್ರಿ ಕಾಡುಕೋಣವೊಂದು ಅಡ್ಡ ಬಂದಿರುವ ಘಟನೆ ಗುರುವಾರ (ಜೂ.೨೭) ನಡೆದಿದೆ.

ಸುಳ್ಯದ ಆಂಬ್ಯುಲೆನ್ಸ್ ಚಾಲಕ ಅಭಿಲಾಷ್ ಅವರು ತಮ್ಮ ವಾಹನದಲ್ಲಿ ತಡರಾತ್ರಿ ತುರ್ತು ಕೆಲಸವೊಂದರ ನಿಮಿತ್ತ ತೆರಳುತ್ತಿದ್ದರು. ಈ ವೇಳೆ ಕುಕ್ಕಂದೂರಿನ ಕಿನ್ನಿಮಾನಿ ಪೂಮಾಣಿ ದೇವಸ್ಥಾನದ ಹತ್ತಿರ ಕಾಡು ಕೋಣ ಹಠಾತ್ ರಸ್ತೆಯಲ್ಲಿ ಅಡ್ಡ ಬಂದಿದೆ. ತಕ್ಷಣ ಅವರು ಬ್ರೇಕ್ ಹಾಕಿ ತಮ್ಮ ವಾಹನವನ್ನು ನಿಲ್ಲಿಸಿದ್ದಾರೆ. ಮೊಬೈಲ್ ಮೂಲಕ ಕಾಡುಕೋಣದ ಫೋಟೋವನ್ನು ಕ್ಲಿಕ್ಕಿಸಿದ್ದಾರೆ. ಸ್ವಲ್ಪ ಹೊತ್ತು ರಸ್ತೆಯಲ್ಲಿ ನಿಂತಿದ್ದ ಕಾಡುಕೋಣ ನಂತರ ಕಾಡಿನೊಳಗೆ ಹೋಗಿದೆ. ಬಳಿಕ ಅಭಿಲಾಷ್ ಅವರು ಆಂಬ್ಯುಲೆನ್ಸ್ ಚಾಲನೆ ಮಾಡಿಕೊಂಡು ತೆರಳಿದ್ದಾರೆ.

Related posts

ಅರಂತೋಡು: ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ, ತಪ್ಪಿದ ಭಾರಿ ಅವಘಡ

ಕಾಣಿಯೂರು: ಮಕ್ಕಳಾಗಲಿಲ್ಲವೆಂದು ಮನನೊಂದು ಸಾವಿಗೆ ಶರಣಾದ ವ್ಯಕ್ತಿ, ಯಾರೂ ಇಲ್ಲದ ವೇಳೆ ಕೀಟನಾಶಕ  ಸೇವನೆ

ಪುತ್ತೂರು: ಅಡಿಕೆ ಕಳ್ಳರಿಂದ ಲಕ್ಷ – ಲಕ್ಷ ಮೌಲ್ಯದ ಸೊತ್ತು ವಶಕ್ಕೆ..! ಬಂಧನವಾದ ಆ ಖತರ್ನಾಕ್ ಕಳ್ಳರು ಯಾರು? ಇಲ್ಲಿದೆ ಸಂಪೂರ್ಣ ಮಾಹಿತಿ