ಕೊಡಗು

ಮಡಿಕೇರಿ:ಲಾಡ್ಜ್‌ವೊಂದರಲ್ಲಿ ನೇಣು ಬಿಗಿದುಕೊಂಡು ದಂಪತಿ ಆತ್ಮಹತ್ಯೆಗೆ ಶರಣು

ನ್ಯೂಸ್‌ ನಾಟೌಟ್‌ : ನೇಣು ಬಿಗಿದುಕೊಂಡು‌ ದಂಪತಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಡಗಿನ ಸೋಮವಾರಪೇಟೆಯ ಲಾಡ್ಜ್‌ವೊಂದರಲ್ಲಿ ನಡೆದಿದೆ. ಎರಡೂವರೆ ತಿಂಗಳಿಂದ ಲಾಡ್ಜ್‌ನಲ್ಲಿದ್ದ ದಂಪತಿ, ಇದ್ದಕ್ಕಿದ್ದಂತೆ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ತೆಲಂಗಾಣದ ರಾಜು (55) ಮತ್ತು ಸ್ವಾತಿ (53) ಮೃತ ದಂಪತಿ ಎಂದು ತಿಳಿದು ಬಂದಿದೆ. ಎರಡೂವರೆ ತಿಂಗಳಿಂದ ನಿತ್ಯವೂ ಲಾಡ್ಜ್ ಬಿಲ್ ಪಾವತಿಸುತ್ತಿದ್ದ ದಂಪತಿ, ಏನೂ ಕೆಲಸ ಮಾಡದೇ ಸುತ್ತಾಡಿಕೊಂಡಿದ್ದರು ಎನ್ನಲಾಗಿದೆ. ಹಣಕಾಸಿನ ಸಮಸ್ಯೆಯಿಂದ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಸೋಮವಾರಪೇಟೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related posts

ಮಡಿಕೇರಿ: ರಿವರ್ಸ್‌ ತೆಗೆಯುವಾಗ ಏಕಾಏಕಿ ಹಿಂಬದಿಗೆ ಚಲಿಸಿದ ಕಾರು..! ಮುಂದೇನಾಯ್ತು..? ವಿಡಿಯೋ ವೀಕ್ಷಿಸಿ

ಇಂದು ಮಧ್ಯರಾತ್ರಿಯಿಂದ ಕೊಡಗು ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿ

ಉಪ್ಪಿನಂಗಡಿ:ಟಿಪ್ಪರ್ ಮತ್ತು ಬೈಕ್ ಅಪಘಾತ,ಗಂಭೀರ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೆ ಮೃತ್ಯು