ಕರಾವಳಿ

ಸುಬ್ರಹ್ಮಣ್ಯದಲ್ಲಿ ಗುಡ್ಡ ಕುಸಿತ, ಎರಡು ಮಕ್ಕಳ ದುರಂತ ಸಾವು

ನ್ಯೂಸ್ ನಾಟೌಟ್ : ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದ ದೇವಸ್ಥಾನದ ಸಮೀಪದ ಪರ್ವತ ಮುಖಿ ಸಮೀಪ ಹೊಸೊಳಿಕೆ ಕುಸುಮಾಧರ ಅಂಗಡಿ ಅವರ ಮನೆಯ ಬರೆ ಕುಸಿದು ಎರಡು ಮಕ್ಕಳು ಮಣ್ಣಿನಡಿಗೆ ಸಿಲುಕಿ ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ.

ಭಾರಿ ಮಳೆಯಿಂದ ಸುಬ್ರಹ್ಮಣ್ಯದ ಕುಮಾರಧಾರ ನದಿ ಜಲಾವೃತವಾಗಿದ್ದು ಇದೀಗ ಸ್ಥಳೀಯರಲ್ಲಿ ಭಾರಿ ಆತಂಕಕ್ಕೆ ಕಾರಣವಾಗಿದೆ. ಸದ್ಯ ಮಣ್ಣಿನಡಿಗೆ ಸಿಲುಕಿಕೊಂಡಿರುವ ಎರಡು ಮಕ್ಕಳ ಮೃತದೇಹವನ್ನು ಹೊರಕ್ಕೆ ತೆಗೆಯಲು ಸ್ಥಳೀಯರು ಭಾರಿ ಪ್ರಯತ್ನ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.

Related posts

ಮೊಮ್ಮಗನ ಶವದೊಂದಿಗೆ 10 ದಿನ ಇದ್ದ ಅಜ್ಜಿ..! ಶವ ಕೊಳೆತು ಹೋಗಿದ್ರೂ ಮೊಮ್ಮಗನ ಶವಕ್ಕೆ ದಿನ ಸ್ನಾನ ಮಾಡಿಸಿ ಬಟ್ಟೆ ಹಾಕಿಸುತ್ತಿದ್ದದ್ದು ಏಕೆ?

ಸುಪ್ರೀಂ ಕೋರ್ಟ್ ವಕೀಲರಾಗಿ ಶೇಖರ್ ನೇಮಕ, ಒಕ್ಕಲಿಗ ಸಮುದಾಯಕ್ಕೆ ದೊಡ್ಡ ಸ್ಫೂರ್ತಿ

ತೀರ್ಥಹಳ್ಳಿಯಲ್ಲಿ ಕಾರು-ಬಸ್‌ ನಡುವೆ ಅಪಘಾತ: ಮಂಗಳೂರು ಕುಪ್ಪೆಪದವಿನ ಯುವಕ ಸಾವು