ಕರಾವಳಿ

ಸುಬ್ರಹ್ಮಣ್ಯ: ಚಲಿಸುತ್ತಿದ್ದ KSRTC ಬಸ್ ಮೇಲೆಯೇ ಕಾಡಾನೆ ದಾಳಿ, ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿತು ಭಾರಿ ಅನಾಹುತ..!

ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಆನೆ ದಾಳಿ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿದೆ. ಮನುಷ್ಯನ ಮೇಲೆ ದಾಳಿ ನಡೆಸುತ್ತಿದ್ದ ಆನೆಗಳು ಇದೀಗ ಘನ ವಾಹನದ ಮೇಲೂ ದಾಳಿ ನಡೆಸಲು ಆರಂಭಿಸಿವೆ. ಗುರುವಾರ ರಾತ್ರಿ ಪುತ್ತೂರಿನಿಂದ ಸುಬ್ರಹ್ಮಣ್ಯ ಮೂಲಕ ಬೆಂಗಳೂರಿಗೆ ಸಂಚರಿಸುತ್ತಿದ್ದ ಸ್ಲೀಪರ್ ಕೋಚ್ KSRTC ಬಸ್ ಮೇಲೆಯೇ ಕಾಡಾನೆ ದಾಳಿ ನಡೆದಿದೆ.

ದಾಳಿಯಿಂದಾಗಿ ಬಸ್ ಗೆ ಹಾನಿಯಾಗಿದೆ. ಪ್ರಯಾಣಿಕರೆಲ್ಲರು ಸುರಕ್ಷಿತವಾಗಿ ಪಾರಾಗಿದ್ದಾರೆ. ಸುಬ್ರಹ್ಮಣ್ಯ – ಗುಂಡ್ಯ ರಾಜ್ಯ ಹೆದ್ದಾರಿಯ ಕೆಂಜಾಳ ಸಮೀಪದ ಅನಿಲ ಎಂಬಲ್ಲಿ ತಡರಾತ್ರಿ ಘಟನೆ ನಡೆದಿದೆ. ಬಸ್ ಚಾಲಕ ಅನಿಲ ಎಂಬಲ್ಲಿ ರಸ್ತೆ ಬದಿ ನಿಂತಿದ್ದ ಕಾಡಾನೆಯನ್ನು ಕಂಡು ತಪ್ಪಿಸಲು ಯತ್ನಿಸಿದ್ದಾನೆ. ಆದರೂ ಬಿಡದೆ ದಾಳಿ ಮಾಡಿದ ಕಾಡಾನೆ ಬಸ್ಸಿನ ಎಡಭಾಗಕ್ಕೆ ದಂತದಿಂದ ತಿವಿದಿದೆ. ಚಾಲಕನ ಸಮಯ ಪ್ರಜ್ಞೆಯಿಂದ ಭಾರಿ ದುರಂತವೊಂದು ತಪ್ಪಿದೆ ಎನ್ನಲಾಗಿದೆ. ಸ್ಥಳಕ್ಕೆ ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿ ರಾಘವೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂತರ ಬಸ್ ವಾಪಸ್ ಬೆಂಗಳೂರಿನತ್ತ ತೆರಳಿತು ಎಂದು ತಿಳಿದು ಬಂದಿದೆ.

Related posts

ಸುಳ್ಯ: ಕಲ್ಲಿನಿಂದ ಜಜ್ಜಿ ಯುವಕನ ಬರ್ಬರ ಹತ್ಯೆ ಪ್ರಕರಣ, ಕೊಡಗು ಮೂಲದ ವ್ಯಕ್ತಿಯನ್ನು ಕಾಂತಮಂಗಲದಲ್ಲಿ ಕೊಂದು ಹಾಕಿರುವ ಶಂಕೆ, ಸ್ಥಳಕ್ಕೆ ಆಗಮಿಸಿದ ಪೊಲೀಸ್ ಪಡೆ

ಕಾಸರಗೋಡು: ಪಿಸ್ತಾದ ಸಿಪ್ಪೆ ಗಂಟಲಲ್ಲಿ ಸಿಲುಕಿ 2 ವರ್ಷದ ಮಗು ಸಾವು..! ವೈದ್ಯರು ತಪಾಸಣೆ ನಡೆಸಿ ಗಂಟಲಲ್ಲಿ ಯಾವುದೇ ವಸ್ತುಗಳು ಸಿಲುಕಿಲ್ಲ ಎಂದಿದ್ದರು..!

ಸುಳ್ಯಕ್ಕೆ ಅಂಬಾನಿ ಬಂದ್ರೂ ಕೇವಲ 10 ರು.ಗೆ ಹೊಟ್ಟೆ ತುಂಬಾ ಊಟ..!