ಕರಾವಳಿ

ಸುಬ್ರಹ್ಮಣ್ಯ: ಯುವಕನಿಗೆ ಪೊಲೀಸ್ ಥಳಿಸಿದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್‌

ನ್ಯೂಸ್ ನಾಟೌಟ್ : ಸುಬ್ರಹ್ಮಣ್ಯ ‍ಷಷ್ಠಿ ಜಾತ್ರೆಯಲ್ಲಿ ವ್ಯಾಪಾರ ನಡೆಸುತ್ತಿದ್ದ ಯುವಕನಿಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಥಳಿಸಿರುವ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.

ಇದೀಗ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆಂತರಿಕ ತನಿಖೆ ನಡೆಸಿದ ಪೊಲೀಸ್ ಇಲಾಖೆ ಪೊಲೀಸ್ ಅಧಿಕಾರಿ ಭೀಮಣ್ಣ ಗೌಡ ಎಂಬುವವರನ್ನು ಕಡಬ ಠಾಣೆಗೆ ವರ್ಗಾಯಿಸಲಾಗಿದೆ ಎಂದು ತಿಳಿದು ಬಂದಿದೆ, ಜಾತ್ರೆಯಲ್ಲಿ ಹಣ ನೀಡಿಲ್ಲ ಅನ್ನುವ ಕಾರಣಕ್ಕೆ ವ್ಯಾಪಾರಿ ಯುವಕ ಕಟ್ರುಪಾಡಿ ಗ್ರಾಮದ ಭೀಮಗುಂಡಿ ನಿವಾಸಿ ಶಶಿಕಿರಣ್ ಅವರಿಗೆ ಭೀಮಣ್ಣ ಠಾಣೆಗೆ ಕರೆದುಕೊಂಡು ಹೋಗಿ ಹಿಗ್ಗಾಮುಗ್ಗಾ ಥಳಿಸಿದ್ದರು ಎನ್ನುವ ದೂರು ದಾಖಲಾಗಿತ್ತು. ಈ ಬೆನ್ನಲ್ಲೇ ಚಿತ್ರದುರ್ಗ ಮೂಲದ ಭೀಮಣ್ಣ ಗೌಡ ಬಿರಾದಾರ ಅವರನ್ನು ಕಡಬ ಠಾಣೆಗೆ ವರ್ಗಾಯಿಸಿ ಆದೇಶ ಹೊರಡಿಸಲಾಗಿದೆ ಎಂದು ತಿಳಿದು ಬಂದಿದೆ. ಸದ್ಯ ಶಶಿ ಕಿರಣ್ ಆಸ್ಪತ್ರೆಯಲ್ಲಿದ್ದು ಚೇತರಿಸಿಕೊಳ್ಳುತ್ತಿದ್ದಾರೆ.

Related posts

ಮೇ2ರಂದು ಸಂಪಾಜೆ, ಚೆಂಬು, ಭಾಗಮಂಡಲಕ್ಕೆ ಬೆಳಗ್ಗೆಯಿಂದ ಕರೆಂಟ್ ಇಲ್ಲ, ಯಾವ ಕಾರಣಕ್ಕಾಗಿ..? ಇಲ್ಲಿದೆ ಡಿಟೇಲ್ಸ್

ಧರ್ಮಸ್ಥಳದಲ್ಲಿ ಧರ್ಮಾಧಿಕಾರಿಗಳ 55ನೇ ವರ್ಧಂತ್ಯುತ್ಸವಕ್ಕೆ ತಯಾರಿ

ಕುಕ್ಕರ್‌ ಬಾಂಬ್‌ ಸ್ಫೋಟದ ಸಂತ್ರಸ್ತ ಪುರುಷೋತ್ತಮ ಪೂಜಾರಿಗೆ ನವೀಕೃತ ಮನೆ ಹಸ್ತಾಂತರ