ಕರಾವಳಿ

ಸುಬ್ರಹ್ಮಣ್ಯ ಗ್ರಾಂ.ಪ. ಸದಸ್ಯೆ ಕಿಡ್ನಾಪ್ ಅಲ್ಲ…ಪ್ರಿಯಕರನ ಜತೆಗೆ ಪರಾರಿ..!

ನ್ಯೂಸ್ ನಾಟೌಟ್ : ದಿಢೀರ್ ನಾಪತ್ತೆಯಾದ ಸುಬ್ರಹ್ಮಣ್ಯದ ಗ್ರಾಂ. ಪಂ.ಸದಸ್ಯೆ ವಿವಾಹಿತೆ ಎರಡು ಮಕ್ಕಳ ತಾಯಿ ಭಾರತಿ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ. ತಾನು ಪ್ರೀತಿಸಿದವನ ಒಟ್ಟಿಗೆ ಇಷ್ಟಪಟ್ಟು ಬಂದಿದ್ದೇನೆ. ನನ್ನನ್ನು ಯಾರೂ ಕಿಡ್ನಾಪ್ ಮಾಡಿಲ್ಲ ಎಂದು ಹೇಳುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ನಾನು ನಾನಾಗಿಯೇ ಬಂದಿದ್ದೇನೆ. ನನ್ನನ್ನು ಯಾರೂ ಅಪಹರಿಸಿಲ್ಲ. ನಾನೇ ಅವರನ್ನು ಮನೆಯ ಹತ್ತಿರ ಬರಲು ಹೇಳಿದ್ದೆ. ಅವರು ಬಂದು ನನ್ನನ್ನು ಕರೆದುಕೊಂಡು ಹೋದರು. ಐದು ವರ್ಷದಿಂದ ನಾನು ಅವರನ್ನು ಲವ್ ಮಾಡುತ್ತಿದ್ದೇನೆ. ಮದುವೆಗೆ ಮುಂಚೆಯೂ ಲವ್ ಮಾಡುತ್ತಿದ್ದೆ. ಈಗಲೂ ಲವ್ ಮಾಡುತ್ತಿದ್ದೇನೆ. ನಮಗೆ ಯಾರು ತೊಂದರೆ ಕೊಡಬೇಡಿ. ನಮ್ಮ ಬಗ್ಗೆ ಯಾರ ಹತ್ತಿರವೂ ಕೇಳುವುದು. ನಮಗೆ ತೊಂದರೆ ಕೊಟ್ಟರೆ ನಾವಿಬ್ಬರು ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ. ಏನಾದರೂ ಹೆಚ್ಚು ಕಮ್ಮಿ ಆದರೆ ನೀವೇ ಜವಾಬ್ದಾರರು ಎಂದು ವಿಡಿಯೋದಲ್ಲಿ ಭಾರತಿ ಹೇಳಿಕೊಂಡಿದ್ದಾರೆ.

ಭಾರತಿ ಹೇಳಿದ್ದೇನು ? ಇಲ್ಲಿದೆ ನೋಡಿ

ಭಾರತಿ ಕಾಣೆಯಾಗಿ ೨೦ ದಿನಗಳಾಗಿದ್ದರೂ ಪತ್ತೆಯಾಗಿರಲಿಲ್ಲ. ಬೆಂಗಳೂರು, ಆಂಧ್ರಪ್ರದೇಶದಲ್ಲಿ ಲೊಕೇಶನ್ ಟ್ರೇಸ್ ಆಗಿದೆ ಎಂದು ಪೊಲೀಸರು ತಿಳಿಸಿದ್ದರು. ಆಕೆಯನ್ನು ಹುಡುಕುವುದಕ್ಕೆ ಪೊಲೀಸರ ತಂಡ ವ್ಯಾಪಕ ಶ್ರಮವಹಿಸಿತ್ತು.

Related posts

ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ – ಕಾಲೇಜಿಗೆ ನಾಳೆಯೂ ( ಆ.2) ರಜೆ, ಜಿಲ್ಲಾಧಿಕಾರಿ ಘೋಷಣೆ

ದುಗಲಡ್ಕ: ಮದ್ಯದ ನಶೆಯಲ್ಲಿ ನೆರೆಮನೆಯವನ ಬೆನ್ನಿಗೆ ಕಡಿದ ಭೂಪ..! ಮುಂದೇನಾಯ್ತು..? ಇಲ್ಲಿದೆ ನೋಡಿ ಸಂಕ್ಷಿಪ್ತ ವರದಿ

ಇಂದು (ಜು.೧೭) ಹಾಗೂ ನಾಳೆ (ಜು.೧೮) ಉಚಿತ ಅಭಾ ಕಾರ್ಡ್ ನೋಂದಣಿ ಶಿಬಿರ