ಕರಾವಳಿಸುಳ್ಯ

ಸುಬ್ರಹ್ಮಣ್ಯ:ಶಾರ್ಟ್ ಸರ್ಕ್ಯೂಟ್‌ನಿಂದ ಕ್ವಾಲಿಸ್‌ನಲ್ಲಿ ಧಗಧಗನೆ ಉರಿದ ಬೆಂಕಿ,ಮುಂದೇನಾಯ್ತು?

ನ್ಯೂಸ್ ನಾಟೌಟ್ : ಕುಕ್ಕೆ ಸುಬ್ರಮಣ್ಯದ ಆದಿಸುಬ್ರಹ್ಮಣ್ಯ ಸರ್ಪಸಂಸ್ಕಾರ ಯಾಗ ಶಾಲೆಯ ಸಮೀಪ ಕ್ವಾಲಿಸ್ ಕಾರು ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿಗೆ ಆಹುತಿಯಾದ ಘಟನೆ ಇಂದು ಮುಂಜಾನೆ ಸಂಭವಿಸಿದೆ.

ಬೆಂಗಳೂರಿನಿಂದ ಸರ್ಪಸಂಸ್ಕಾರಕ್ಕಾಗಿ ಕುಕ್ಕೆ ಸುಬ್ರಮಣ್ಯಕ್ಕೆ ಬಂದಿದ್ದ ಕುಟುಂಬ ಬಂದು ಆದಿ ಸುಬ್ರಮಣ್ಯದ ಸರ್ಪಸಂಸ್ಕಾರ ಯಾಗ ಶಾಲೆಯ ಮುಂಭಾಗ ಕಾರು ನಿಲ್ಲಿಸಿದ್ದರು. ಕಾರಿನಲ್ಲಿ ಆಚಾನಕ್ಕಾಗಿ ಕಾಣಿಸಿಕೊಂಡ ಬೆಂಕಿ ಇದ್ದಕ್ಕಿದ್ದಂತೆ ಕಾರನ್ನು ಸಂಪೂರ್ಣ ವ್ಯಾಪಿಸಿದೆ ಎಂದು ತಿಳಿದು ಬಂದಿದೆ.

ಇದನ್ನು ಕಂಡ ಸ್ಥಳೀಯರು ಕೂಡಲೇ ಕಾರ್ಯ ಪ್ರವೃತ್ತರಾಗಿದ್ದಾರೆ. ಅವರ ಸಮಯ ಪ್ರಜ್ಞೆಯಿಂದ ಬೆಂಕಿಯನ್ನು ನಂದಿಸಿದರು.ಕಾರಿನ ಹಿಂದೆ ಹಾಗೂ ಮುಂದೆ ಸಾಲಾಗಿ ನಿಂತಿದ್ದ ಸುಮಾರು 30ಕ್ಕೂ ಹೆಚ್ಚು ವಾಹನಗಳು ಬೆಂಕಿಗೆ ಆಹುತಿಯಾಗುವ ಭಾರಿ ಅನಾಹುತವನ್ನು ತಪ್ಪಿಸಿದ್ದಾರೆ.

Related posts

ಸಿಎಂ ಸಿದ್ದರಾಮಯ್ಯ ಬಗ್ಗೆ ಸುಳ್ಳು ಆರೋಪ ಮಾಡಿದ ಶಾಸಕ ಹರೀಶ್ ಪೂಂಜ ವಿರುದ್ಧ ದೂರು

ಮಗುವನ್ನು ಏಸುವಿನ ಶಿಲುಬೆ ಬಳಿ ಮಲಗಿಸಿದ ಹೆತ್ತವರು..!

ಕುಕ್ಕೆ ಸುಬ್ರಹ್ಮಣ್ಯ: ಆಂಜನೇಯನ ದೇವಸ್ಥಾನಕ್ಕೆ ಕನ್ನ..!, ಸಿಸಿಟಿವಿಯಲ್ಲಿ ದೃಶ್ಯ ಸೆರೆ