ಕರಾವಳಿಸುಳ್ಯ

ಸುಬ್ರಹ್ಮಣ್ಯ:ದ.ಕ ಕಾಂಗ್ರೆಸ್‌ ಅಭ್ಯರ್ಥಿಗೆ ದೈವದ ಅಭಯ..!,ಈ ಬಾರಿ ಗೆಲುವಿನ ಮಂದಹಾಸ ಬೀರುವರೇ ಪದ್ಮರಾಜ್‌ ?

ನ್ಯೂಸ್‌ ನಾಟೌಟ್‌: ಕುಕ್ಕೆ ಸಬ್ರಹ್ಮಣ್ಯದ ಕುಲ್ಕುಂದದಲ್ಲಿ ಮಾ. 4ರಂದು ನಡೆದ ವಿಷ್ಣುಮೂರ್ತಿ ದೈವದ ಒತ್ತೆಕೋಲದಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ರಾಮಯ್ಯರವರು ಪಾಲ್ಗೊಂಡರು.ಈ ವೇಳೆ ಶ್ರೀ ದೈವದ ಶ್ರೀಮುಡಿಗಂಧ ಪ್ರಸಾದವನ್ನು ಸ್ವೀಕರಿಸಿ ದೈವದ ಅಭಯ ಪಡೆದರು.

ಈ ಸಂದರ್ಭ ಚುನಾವಣೆಗೆ ಸ್ಪರ್ಧಿಸಿ ಗೆಲುವಾಗುವ ಕುರಿತು ದೈವದ ಅಭಯ ನುಡಿ ಪಡೆದರು.ಈ ವೇಳೆ ದೈವಸ್ಥಾನದ ಅಧ್ಯಕ್ಷರು ಕಾಂಗ್ರೆಸ್ ನಾಯಕ ರವೀಂದ್ರಕುಮಾರ್ ರುದ್ರಪಾದರವರು ಕಾಂಗ್ರೆಸ್‌ ಅಭ್ಯರ್ಥಿ ಪದ್ಮರಾಜ್ ರವರಿಗೆ ಶಾಲು ಹೊದಿಸಿ ಪುಷ್ಪಗುಚ್ಚ ನೀಡಿ ಗೌರವ ಸಲ್ಲಿಸಿದರು. ಈ ಸಂದರ್ಭದಲ್ಲಿ ಸುಬ್ರಮಣ್ಯದ ಕಾಂಗ್ರೆಸ್ ನಾಯಕರು, ಸಾರ್ವಜನಿಕರು, ಭಕ್ತಾದಿಗಳು ಉಪಸ್ಥಿತರಿದ್ದರು.

Related posts

ಸಂಪಾಜೆ: ಕೈಪಡ್ಕ ಪರಿಸರದಲ್ಲಿ ಧೂಳೋ..ಧೂಳು..! ನಿರಂತರ ಮಣ್ಣು ತೆಗೆಯುವ ಪ್ರಕ್ರಿಯೆಗೆ ಹೈರಾಣಾದ ಜನ..!

ಉಡುಪಿ: Daijiworld TV ಚಾನೆಲ್ ನ “ಈ ಬಂಧನ” ಕಾರ್ಯಕ್ರಮಕ್ಕೆ ಸುಳ್ಯದ ಜೋಡಿ ಆಯ್ಕೆ, ಡಾ. ಅನುರಾಧಾ ಕುರುಂಜಿ ಮತ್ತು ಚಂದ್ರಶೇಖರ ಬಿಳಿನೆಲೆ ದಂಪತಿಗಳ ಮನದ ಮಾತು

ಭಾರತೀಯ ಸೇನೆಯ ಉನ್ನತ ಹುದ್ದೆಗೇರಿದ ಮತ್ತೋರ್ವ ಕೊಡಗಿನ ವೀರ, ಲೆಫ್ಟಿನೆಂಟ್ ಪದವಿಗೇರಿದ ಯುವಕ ಯಾರು..?