ಕ್ರೈಂವೈರಲ್ ನ್ಯೂಸ್

ವಿದ್ಯಾರ್ಥಿನಿಯನ್ನು ಸಂದರ್ಶನ ಇದೆ ಎಂದು ಹೊಟೇಲ್ ಗೆ ಕರೆದೊಯ್ದುದ್ದೇಕೆ ಶಿಕ್ಷಕ? ಪೊಲೀಸರಿಗೆ ನೀಡಿದ ದೂರಿನಲ್ಲೇನಿದೆ? ಆಕೆಯ ವಿಡಿಯೋದ ಬಗ್ಗೆ ಪೊಲೀಸರು ಹೇಳಿದ್ದೇನು?

ನ್ಯೂಸ್‌ ನಾಟೌಟ್‌: ಕೆಲಸ ಕೊಡಿಸುವುದಾಗಿ ನಂಬಿಸಿ ಹೋಟೆಲ್ ಗೆ ಕೊರೆದೊಯ್ದು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಖಾಸಗಿ ಕಾಲೇಜಿನ ಉಪನ್ಯಾಸ ಮದನ್ ಕುಮಾರ್ ಎಂಬಾತನನ್ನು ಬೆಂಗಳೂರಿನ ಗಂಗಮ್ಮನಗುಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಯಲಹಂಕದ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕ ಆಗಿರುವ ಮದನ್ ಕುಮಾರ್ ಗೆ ಅದೇ ಕಾಲೇಜಿನ ವಿದ್ಯಾರ್ಥಿನಿ ಪಾರ್ಟ್ ಟೈಮ್ ಉದ್ಯೋಗ ಕೊಡಿಸುವಂತೆ ಮನವಿ ಮಾಡಿದ್ದಳು. ಇದನ್ನೆ ಬಂಡವಾಳ ಮಾಡಿಕೊಂಡು ಆರೋಪಿ ಮದನ್ ಕುಮಾರ್, ವಿದ್ಯಾರ್ಥಿನಿಯನ್ನು ಕೆಲಸ ಕೊಡಿಸುವುದಾಗಿ ನಂಬಿಸಿ ಎಂಜಿ ರಸ್ತೆಯಲ್ಲಿ ಸಂದರ್ಶನ ಇದೆ ಎಂದು ಹೊಟೇಲ್ ಗೆ ಕರೆದೊಯ್ದು ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ಆರೋಪಿಸಲಾಗಿದೆ.
ವಿಡಿಯೋ ಮಾಡಿ ಸಂತ್ರಸ್ತೆಗೆ ಬೆದರಿಕೆವೊಡ್ಡಿದ್ದ ಎಂದು ಹೇಳಲಾಗುತ್ತಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ ಎಂದು ವರದಿ ತಿಳಿಸಿದೆ.

Related posts

2.06 ಲಕ್ಷ ರೂ. ಮೌಲ್ಯದ ಲಾರಿಯ ಡಿಸ್ಕ್‌, ಚಕ್ರಗಳನ್ನು ಕಳವುಗೈದ ಚಾಲಕ ಮತ್ತು ಕ್ಲೀನರ್‌..!ಕಳವು ನಿರ್ಧಾರ ಕೈಗೊಂಡಿದ್ಯಾಕೆ ಗೊತ್ತಾ..?

ಹಲವು ತಿಂಗಳಿನಿಂದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಚಿನ್ನ-ಬೆಳ್ಳಿ ಹರಿಕೆ ಅಂಗಡಿ ಬಂದ್..? ಮುಚ್ಚಿದ ಬಾಗಿಲಿನ ಹಿಂದಿನ ಅಸಲಿ ಕಥೆಯೇನು..?

‘ಸೌಜನ್ಯ’ ಎಂಬ ಹೆಣ್ಣಿನ ಪರ ಧ್ವನಿ ಎತ್ತದ ನಾಯಕರಿಗೆ ನೋಟಾವೇ ಅಸ್ತ್ರ..! ದಕ್ಷಿಣ ಕನ್ನಡ ಜಿಲ್ಲೆಯ ಎಷ್ಟು ಜನರ ಸಮ್ಮತವಿದೆ..? ಜನಾಂದೋಲದ ಲಿಂಕ್ ಒತ್ತಿ – ವೋಟ್ ಮಾಡಿ ತಿಳಿಸಿ