ಕ್ರೈಂ

ಅಪಘಾತದಲ್ಲಿ ತಲೆಗೆ ಬಲವಾದ ಏಟು! ಎಂಟು ಹೊಲಿಗೆ ಹಾಕಿದರೂ ಆಸ್ಪತ್ರೆ ಬೆಡ್‌ನಲ್ಲೇ ಪರೀಕ್ಷೆ ಬರೆದ ವಿದ್ಯಾರ್ಥಿ!

ನ್ಯೂಸ್ ನಾಟೌಟ್: ಪರೀಕ್ಷೆ ಬರೆಯಲು ಶಾಲೆಗೆ ತೆರಳುವ ವೇಳೆ ಅಪಘಾತವಾಗಿ ವಿದ್ಯಾರ್ಥಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದರೂ ಕೂಡ ಛಲ ಬಿಡದೆ ಬೆಡ್‌ನಲ್ಲಿ ಪರೀಕ್ಷೆ ಬರೆದ ಘಟನೆ ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ನಡೆದಿದೆ.

15 ವರ್ಷದ ಸಂದೀಪ್ ಮಾಝಿ ಪ್ರೌಡಶಾಲೆ ಪರೀಕ್ಷೆ ಬರೆಯಲು ತನ್ನ ತಂದೆಯ ಬೈಕ್ ನಲ್ಲಿ ಪರೀಕ್ಷಾ ಕೇಂದ್ರಕ್ಕೆ ತೆರಳಿದ್ದಾನೆ. ಈ ವೇಳೆ ವಿದ್ಯಾರ್ಥಿ ಬೈಕ್ ಗೆ ಮತ್ತೊಂದು ಬೈಕ್ ಬಂದು ಡಿಕ್ಕಿ ಹೊಡೆದಿದೆ. ಪರಿಣಾಮ ಸಂದೀಪ್ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಿದ್ದಾರೆ.

ತಲೆಗೆ ಏಟು ಬಿದ್ದ ಕಾರಣ ಎಂಟು ಹೊಲಿಗೆಯನ್ನು ಹಾಕಲಾಗಿತ್ತು. ಆದರೂ ಸಂದೀಪ್ ಮಾತ್ರ ಪೊಲೀಸರ ಬಳಿ ತನಗೆ ಪರೀಕ್ಷೆ ಬರೆಯಬೇಕು ಎಂದು ತಿಳಿಸಿದ್ದನು. ವಿದ್ಯಾರ್ಥಿಯ ಮನವಿಯಂತೆ ಪೊಲೀಸರು ಪರೀಕ್ಷಾ ಕೇಂದ್ರಕ್ಕೆ ಕರೆತಂದರು. ಆದರೆ ಪರೀಕ್ಷೆ ಬರೆಯುವ ವೇಳೆ ಪ್ರಜ್ಞೆತಪ್ಪಿದ್ದಾನೆ. ಬಳಿಕ ಆತನನ್ನು ಮತ್ತೆ ಆಸ್ಪತ್ರೆಗೆ ಕರೆತಂದರು. ವಿದ್ಯಾರ್ಥಿಯ ಛಲ ನೋಡಿದ ಹೊಗ್ಲಿ ಕೃಷಿ ಮುಖ್ಯಸ್ಥರು ಮನೋಜ್ ಚಕ್ರವರ್ತಿ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿ ಆಸ್ಪತ್ರೆಯಲ್ಲೇ ಪರೀಕ್ಷೆ ಬರೆಯಲು ಅವಕಾಶ ಒದಗಿಸಿದರು.

Related posts

ರಶ್ಮಿಕಾ ಮಂದಣ್ಣ ವಿಡಿಯೋ ಡೀಪ್‌ಫೇಕ್ ಮಾಡಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿದ್ರಾ..? ಈ ಬಗ್ಗೆ ದೆಹಲಿ ಪೊಲೀಸರು ಹೇಳಿದ್ದೇನು?

ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ಪ್ರಕರಣ: ಆರೋಪಿಗೆ ಜಾಮೀನು

ನಟ ದರ್ಶನ್ ಜಾಮೀನಿಗೆ ಹೈಕೋರ್ಟ್ ಮೆಟ್ಟಿಲೇರಿದ ಬೆನ್ನಲ್ಲೇ ಮತ್ತೊಂದು ಪ್ರಕರಣ ದಾಖಲು..! ಬಿಡುಗಡೆಯಾದ್ರೂ ದಾಸ ಮತ್ತೆ ಜೈಲು ಸೇರುವ ಸಾಧ್ಯತೆ..!