ಕ್ರೈಂ

ಪೈಚಾರು: ಶಾಲಾ ಬಾಲಕಿಯನ್ನು ಕಾರಿನಲ್ಲಿ ಕರೆ ತಂದವನಿಗೆ ಬಿತ್ತು ಗೂಸಾ..!

368
Spread the love

ಸುಳ್ಯ: ಶಾಲಾ ಬಾಲಕಿಯನ್ನು ಪುತ್ತೂರಿನಿಂದ ಮನೆಗೆ ಕಾರಿನಲ್ಲಿ ಕರೆ ತಂದ ಯುವಕ ಹಾಗೂ ಆಟೋ ರಿಕ್ಷಾ ಚಾಲಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಸುಳ್ಯದ ಪೈಚಾರಿನಿಂದ ವರದಿಯಾಗಿದೆ. ಘಟನೆ ಕಾಡ್ಗಿಚ್ಚಿನಂತೆ ಹಬ್ಬುತ್ತಿದ್ದಂತೆ ಬಜರಂಗದಳದ ಕಾರ್ಯಕರ್ತರು ಮಧ್ಯಪ್ರವೇಶಿಸಿ ರಾಜಿಯಲ್ಲಿ ಇತ್ಯರ್ಥ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ರಕ್ಷಿತ್ ಎಂಬ ಯುವಕ ತನಗೆ ಪರಿಚಯವಿದ್ದ ಶಾಲಾ ಬಾಲಕಿಯೊಬ್ಬಳನ್ನು ಪುತ್ತೂರಿನಿಂದ ಆಕೆಯ ಮನೆಗೆ ಬಿಡಲೆಂದು ಕಾರಲ್ಲಿ ಕರೆತಂದಿದ್ದಾನೆ. ಇದನ್ನು ಸಾತ್ವಿಕ್ ಎಂಬ ಯುವಕ ತೀವ್ರವಾಗಿ ವಿರೋಧಿಸಿದ್ದಾನೆ. ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ನಂತರ ಸಾತ್ವಿಕ್ ಎಂಬ ಯುವಕ ರಕ್ಷಿತ್ ಹಾಗೂ ಜತೆಗಿದ್ದ ಆಟೋ ಚಾಲಕನಿಗೆ ಥಳಿಸಿದ್ದಾನೆ ಎಂದು ತಿಳಿದು ಬಂದಿದೆ. ನಂತರ ಎರಡೂ ಕಡೆಯವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಎರಡೂ ಕಡೆಯವರು ಭಜರಂಗದಳದವರಾಗಿದ್ದುದರಿಂದ ವರ್ಷಿತ್ ಮತ್ತಿತರರು ಮಧ್ಯಪ್ರವೇಶಿಸಿ ಪ್ರಕರಣವನ್ನು ರಾಜಿಯಲ್ಲಿ ಇತ್ಯರ್ಥಗೊಳಿಸಲು ಮಾತುಕತೆ ನಡೆಸಿದರು.

See also  ಪುಟ್ಟ ಬಾಲಕರ ದೇಹವನ್ನು ಉಪ್ಪಿನಲ್ಲಿ ಹೂತಿಟ್ಟದ್ದೇಕೆ ಹೆತ್ತವರು..? ನೀರಿನ ಹೊಂಡದಲ್ಲಿ ಬಿದ್ದ ಮಕ್ಕಳು ಮತ್ತೆ ಬದುಕಿ ಬಂದ್ರಾ..? ಪೊಲೀಸರು ಹೇಳಿದ್ದೇನು?
  Ad Widget   Ad Widget   Ad Widget   Ad Widget   Ad Widget   Ad Widget