ದೇಶ-ಪ್ರಪಂಚ

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಬೇಕಾಗಿದ್ದ ವಿದ್ಯಾರ್ಥಿ ಸೂಸೈಡ್‌!!ಕಾರಣವೇನು?

ನ್ಯೂಸ್‌ ನಾಟೌಟ್‌ :ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಬೇಕಾಗಿದ್ದ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಗ್ಗೆ ವರದಿಯಾಗಿದೆ. ಶಿವಮೊಗ್ಗದ ಸಾಗರ ತಾಲೂಕಿನ ಆನಂದಪುರ ಸಮೀಪದ ಯಡೆಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಪರಶುರಾಮ್ (17) ನೇಣಿಗೆ ಶರಣಾದ ವಿದ್ಯಾರ್ಥಿ.

ಪರಶುರಾಮ್‌ ಆನಂದಪುರದ ಸರ್ಕಾರಿ ಪಬ್ಲಿಕ್ ಶಾಲೆಯಲ್ಲಿ ಎಸ್ಎಸ್ಎಲ್‌ಸಿ ಓದುತ್ತಿದ್ದ. ಇಂದು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಬೇಕಾಗಿದ್ದ ಪರಶುರಾಮ್‌ ಮನೆಯ ಹಿಂಭಾಗದಲ್ಲಿ ನೇಣಿಗೆ ಶರಣಾದ್ದಾನೆ.ಪರೀಕ್ಷೆ ಭಯಕ್ಕೆ ಮೃತಪಟ್ಟನಾ ಅಥವಾ ಬೇರೆ ಯಾವುದಾದರೂ ವಿಚಾರಕ್ಕೆ ಮಾನಸಿಕವಾಗಿ ಖಿನ್ನತೆ ಅನುಭವಿಸುತ್ತಿದ್ದನಾ ಎಂಬುದು ತಿಳಿದು ಬಂದಿಲ್ಲ.ಇನ್ನೂ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಸದ್ಯ ಸ್ಥಳಕ್ಕೆ ಆನಂದಪುರದ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಮಗನ ಮೃತದೇಹವನ್ನು ಕಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Related posts

ನೆದರ್‌ಲ್ಯಾಂಡ್‌ ಯುವತಿ ಜತೆ ಭಾರತದ ಯುವಕನಿಗೆ ಪ್ರೀತಿ..!ಹಿಂದೂ ಸಂಪ್ರದಾಯದಂತೆ ವೈವಾಹಿಕ ಜೀವನಕ್ಕೆ ಕಾಲಿರಿಸಿದ ಜೋಡಿ..!ಇವರಿಬ್ಬರಿಗೂ ಪರಿಚಯ ಹೇಗಾಯ್ತು?ಇಲ್ಲಿದೆ ವರದಿ…

ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡದ್ದೇಕೆ ಸೈನಿಕ..? ಏನಿದು ಆಘಾತಕಾರಿ ಘಟನೆ..?

ಜುವೆಲ್ಲರಿ ಮಳಿಗೆಯೊಳಗಿತ್ತು 26 ಕೋಟಿ ನಗದು..! 90 ಕೋಟಿ ರೂ. ಮೌಲ್ಯದ ಅನಧಿಕೃತ ಸಂಪತ್ತಿನ ದಾಖಲೆ ಐಟಿ ಅಧಿಕಾರಿಗಳ ವಶಕ್ಕೆ..! ಇಲ್ಲಿದೆ ವಿಡಿಯೋ