ದೇಶ-ಪ್ರಪಂಚ

ಆ ಬೀದಿಶ್ವಾನದ ಬಾಯಲ್ಲಿತ್ತು ಮಾನವನ ಕೈ, ಹಾಗಾದ್ರೆ ಆ ಕೈ ಯಾರದ್ದು? ಪೊಲೀಸರು ಹೇಳಿದ್ದೇನು?

ನ್ಯೂಸ್‌ ನಾಟೌಟ್‌: ಬೀದಿ ನಾಯಿಯೊಂದು ರಸ್ತೆಯಲ್ಲಿ ಸಂಚರಿಸಿದ್ದು ಇದನ್ನು ನೋಡಿದ ಜನರು ಹೌಹಾರಿದ್ದಾರೆ. ಯಾಕೆಂದರೆ ಅದು ಬಾಯಲ್ಲಿ ಮಾನವನ ಕೈಯನ್ನು ಕಚ್ಚಿಕೊಂಡು ಹೋಗುತ್ತಿದ್ದು,ಆ ದೃಶ್ಯ ಇದೀಗ ಬಾರಿ ವೈರಲ್ ಆಗಿದೆ.

ಈ ಬೆಚ್ಚಿ ಬೀಳಿಸುವ ಘಟನೆ ಲಕ್ನೋದ ಕಿಂಗ್​ ಜಾರ್ಜ್​ ವೈದ್ಯಕೀಯ ವಿಶ್ವವಿದ್ಯಾಲಯದ ಬಳಿ ಕಂಡುಬಂದಿದೆ. ಅಲ್ಲಿನ ಶತಾಬ್ಧಿ ಹಂತ 3 ಆವರಣದಲ್ಲಿ ನಾಯಿ ತನ್ನ ಬಾಯಲ್ಲಿ ಮಾನವನ ಕೈಯನ್ನು ಕಚ್ಚಿಕೊಂಡು ಹೋಗಿದೆ.ಇದನ್ನು ಜನ ನೋಡಿ ಬಾರಿ ತಲೆಕೆಡಿಸಿಕೊಂಡಿದ್ದಾರೆ.ನಾಯಿಯ ಬಾಯಿಯಲ್ಲಿರುವ ಮಾನವನ ಕೈ ಯಾರದ್ದು ಎಂಬ ಚರ್ಚೆಗಳು ಶುರುವಾಗಿವೆ.

ಕಿಂಗ್​ ಜಾರ್ಜ್​ ವೈದ್ಯಕೀಯ ವಿಶ್ವವಿದ್ಯಾಲಯದ ವಕ್ತಾರರಾದ ಸುಧೀರ್​ ಸಿಂಗ್​ ಈ ಘಟನೆ ಬಗ್ಗೆ ಮಾತನಾಡಿದ್ದಾರೆ, ‘ನಮ್ಮ ತಂಡವು ನಾಯಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದೆ. ಮಾನವನ ಕೈಯ ತುಂಡನ್ನು ನಾಯಿ ಕಚ್ಚಿಕೊಂಡು ಹೋಗುತ್ತಿತ್ತು. ನಾವು ಇದೀಗ ಪೊಲೀಸರಿಗೆ ಮಾಹಿತಿ ನೀಡುವ ಮೂಲಕ ಕಾನೂನು ಕ್ರಮ ಕೈಗೊಳ್ಳುತ್ತೇವೆ’ ಎಂದು ಹೇಳಿದ್ದಾರೆ.ಎಕ್ಸ್​ ಬಳಕೆದಾರ ಪಿಯೂಷ್​ ರೈ ನಾಯಿಯ ಫೋಟೋವನ್ನು ಸಹ ಟ್ವೀಟ್​ ಮಾಡಿದ್ದಾರೆ. ಟ್ವೀಟ್​ನಲ್ಲಿ ‘ಯುಪಿಯ ಅತಿದೊಡ್ಡ ಸರ್ಕಾರಿ ವೈದ್ಯಕೀಯ ಕಾಲೇಜು ಬಳಿ ಶ್ವಾನ ತನ್ನ ದವಡೆಯಲ್ಲಿ ಮಾನವ ಕೈ ಕಚ್ಚಿಕೊಂಡು ಹೋಗುವುದಾಗಿ’ ತಿಳಿಸಿದ್ದಾರೆ.

Related posts

ಗೃಹಜ್ಯೋತಿ ಯೋಜನೆಗೆ ಅಧಿಕೃತ ಚಾಲನೆ ವೇಳೆ ನೆರೆದಿದ್ದ 20 ಸಾವಿರ ಜನರಿಗೆ ಲಾಡು,ಭರ್ಜರಿ ಊಟ..!

ಪ್ರವಾಸ ಪ್ರಿಯರಿಗೆ ಸಿಹಿ ಸುದ್ದಿ, ಮತ್ತೆ ಕೊಡಗಿನ ಕಾವೇರಿ ನಿಸರ್ಗಧಾಮ ಪ್ರವೇಶಕ್ಕೆ ಅವಕಾಶ

ಎಣ್ಣೆ ಹೊಡ್ದು ಟೈಟಾದ ವರ,ಅರ್ಚಕರ ಮಂತ್ರದ ವೇಳೆ ಕಣ್ಣು ಮಂದ,ನಶೆಯಲ್ಲಿ ತೇಲಾಡಿದ ಯುವಕ