ಕ್ರೈಂದಕ್ಷಿಣ ಕನ್ನಡವೈರಲ್ ನ್ಯೂಸ್

ಇದ್ದಕ್ಕಿದ್ದಂತೆ ಎದ್ದ ವಿಚಿತ್ರ ಬಿರುಗಾಳಿಗೆ ಕೊಕ್ಕಡದ ಜನ ತತ್ತರ..! ಗಾಳಿಯಲ್ಲಿ ತೇಲಾಡಿದ ಮನೆ ಹಂಚು- ಶೀಟು, ಸಾವಿರಾರು ಅಡಿಕೆ ಗಿಡಗಳು ಧರೆಗೆ..!

ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ ಜಿಲ್ಲೆಯ ಕೊಕ್ಕಡ ಗ್ರಾಮದ ಗೋಳಿತೊಟ್ಟು ಸೇರಿದಂತೆ ಕೆಲವು ಭಾಗಗಳಲ್ಲಿ ಇಂದು (ಆ.25) ಬೆಳಗ್ಗೆ ಭಾರಿ ಬಿರುಗಾಳಿ ಎದ್ದಿದೆ. ಇಡೀ ಜೀವನದಲ್ಲಿಯೇ ಜನ ಕಂಡು ಕೆಳರಿಯದ ಭಾರಿ ಬಿರುಗಾಳಿ ಇದಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ನ್ಯೂಸ್ ನಾಟೌಟ್ ಗೆ ತಿಳಿಸಿದ್ದಾರೆ.

ಬಿರುಗಾಳಿಯ ರಭಸಕ್ಕೆ ಕೃಷಿಕರೊಬ್ಬ 100 ಅಡಿಕೆ ಗಿಡ ಧರೆಗೆ ಉರುಳಿ ಬಿದ್ದಿದೆ, ಉಳಿದಂತೆ ಕನಿಷ್ಟ ಎಂದರೂ 20 ರಿಂದ 30 ಅಡಿಕೆ ಗಿಡಗಳನ್ನು ಕಳೆದುಕೊಂಡ ನೂರಾರು ಕೃಷಿಕರಿದ್ದಾರೆ.ಅಲ್ಲದೆ ಮನೆಯ ಶೀಟ್ , ಹಂಚುಗಳು ಗಾಳಿಗೆ ಗಿರಗಿರನೆ ತಿರುಗಿ ನೆಲಕ್ಕೆ ಬಿದ್ದಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ಥಳೀಯರಾಗಿರುವ ಯೋಗಿಶ್ ಆಲಂಬಿಲ ಅವರು, ‘ಕೊಕ್ಕಡ ಗ್ರಾಮದ ಹಲವಾರು ಕೃಷಿಕರು ಅಡಿಕೆ ಗಿಡಗಳನ್ನು ಕಳೆದುಕೊಂಡಿದ್ದಾರೆ. ಹಲವರ ಮನೆಗೆ ಭಾರಿ ಪ್ರಮಾಣದ ಹಾನಿಯಾಗಿದೆ. ನಮ್ಮ ಹಿರಿಯರು ಕೂಡ ಹೇಳುತ್ತಿದ್ದಾರೆ, ಇದುವರೆಗೆ ಇಂತಹ ಬಿರುಗಾಳಿಯನ್ನು ನೋಡಿಲ್ಲ ಅಂತ, ಇದ್ದಕ್ಕಿದ್ದಂತೆ ಈ ಗಾಳಿ ಉಪ್ಪಾರಸೇತುವೆಯಿಂದ ಸ್ವಲ್ಪ ಮುಂಭಾಗದಿಂದ ಸಾಗಿಕೊಂಡು ಬಂದಿದೆ. ನಮ್ಮೆಲ್ಲರಿಗೂ ಇದು ಆಶ್ಚರ್ಯ ಮತ್ತು ಆತಂಕ ತರಿಸಿದೆ’ ಎಂದು ತಿಳಿಸಿದರು.

Related posts

ಪ್ರಯಾಗ್‌ ರಾಜ್‌ ಗೆ ಹೊರಟಿದ್ದ ರೈಲಿನ ಮೇಲೆ ಕಲ್ಲು ತೂರಾಟ..! ಇಲ್ಲಿದೆ ವೈರಲ್ ವಿಡಿಯೋ

ಬ್ಯಾಂಕ್ ಆಫ್ ಬರೋಡಾದಲ್ಲಿ ಭರಪೂರ ಉದ್ಯೋಗವಕಾಶ..! ಇಲ್ಲಿದೆ ಸುವರ್ಣಾವಕಾಶ

ಉಡುಪಿಯಲ್ಲಿ ಮತ್ತೆ ಗ್ಯಾಂಗ್ ವಾರ್..! ಬೈಕ್ ಬಿಟ್ಟು ಓಡಿದ ಯುವಕರು..! ಒಂದೇ ತಿಂಗಳಲ್ಲಿ 3 ಬಾರಿ ಪುಂಡರ ಕಾಳಗ..!