ನ್ಯೂಸ್ ನಾಟೌಟ್: ಭಾರತ ಮತ್ತು ಪಾಕಿಸ್ತಾನದ ಇಬ್ಬರು “ಅತ್ಯಂತ ಬುದ್ಧಿವಂತ” ನಾಯಕರು ಪರಮಾಣು ಯುದ್ಧಕ್ಕೆ ತಿರುಗಬಹುದಾಗಿದ್ದ ಪರಿಸ್ಥಿತಿಯನ್ನು ನಿಲ್ಲಿಸಲು ನಿರ್ಧರಿಸಿದರು. ಇಷ್ಟು ದಿನ ತಾವು ಮಧ್ಯಸ್ಥಿಕೆ ವಹಿಸಿ ಯುದ್ಧವನ್ನು ನಿಲ್ಲಿಸಿದ್ದಾಗಿ ಹೇಳುತ್ತಿದ್ದ ಡೊನಾಲ್ಡ್ ಟ್ರಂಪ್ ಇದೇ ಮೊದಲ ಬಾರಿಗೆ ಎರಡು ರಾಷ್ಟ್ರಗಳ ನಡುವಿನ ಯುದ್ಧವನ್ನು ನಿಲ್ಲಿಸಿದ್ದಾಗಿ ತಮ್ಮನ್ನು ತಾವು ಪ್ರಶಂಸಿಸಿಕೊಳ್ಳಲಿಲ್ಲ.
ನಿನ್ನೆ ಶ್ವೇತಭವನದಲ್ಲಿ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ನನ್ನು ಭೋಜನಕೂಟಕ್ಕೆ ಆಹ್ವಾನಿಸಿದ ನಂತರ ಓವಲ್ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಾ ಟ್ರಂಪ್ ಈ ಹೇಳಿಕೆಗಳನ್ನು ನೀಡಿದ್ದಾರೆ.
ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಅವರನ್ನು ಭೇಟಿಯಾಗಿದ್ದು ಗೌರವವಾಗುತ್ತಿದೆ ಎಂದರು. ಮುನೀರ್ ಅವರೊಂದಿಗಿನ ಭೇಟಿಯಲ್ಲಿ ಇರಾನ್ ಬಗ್ಗೆ ಚರ್ಚಿಸಲಾಗಿದೆಯೇ ಎಂದು ಕೇಳಿದಾಗ, ಅವರಿಗೆ ಇರಾನ್ ಬಗ್ಗೆ ಚೆನ್ನಾಗಿ ತಿಳಿದಿದೆ, ಹೆಚ್ಚಿನವರಿಗಿಂತ ಚೆನ್ನಾಗಿ, ಇರಾನ್-ಇಸ್ರೇಲ್ ಬೆಳವಣಿಗೆ ಬಗ್ಗೆ ಅವರು ಅಸಮಾಧಾನಗೊಂಡಿದ್ದಾರೆ. ಆದರೆ ಏನು ನಡೆಯುತ್ತಿದೆ ಎಂಬುದನ್ನು ಅವರು ಕಾದು ನೋಡುತ್ತಾರೆ ಎಂದರು.
ನಾನು ಅವರನ್ನು ಇಂದು ಭೋಜನಕೂಟಕ್ಕೆ ಇಲ್ಲಿಗೆ ತಂದಿದ್ದಕ್ಕೆ ಕಾರಣ, ಭಾರತದೊಂದಿಗೆ ಯುದ್ಧವನ್ನು ಕೊನೆಗೊಳಿಸಿದ್ದಕ್ಕಾಗಿ ನಾನು ಅವರಿಗೆ ಧನ್ಯವಾದ ಹೇಳಲು ಬಯಸಿದ್ದೆ. ನಿಮಗೆ ತಿಳಿದಿರುವಂತೆ, ಪ್ರಧಾನಿ ಮೋದಿ ಸ್ವಲ್ಪ ಸಮಯದ ಹಿಂದೆ ಇಲ್ಲಿಗೆ ಬಂದು ಹೋಗಿದ್ದರು. ನಾವು ಭಾರತದೊಂದಿಗೆ ವ್ಯಾಪಾರ ಒಪ್ಪಂದಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ಈಗ ನಾವು ಪಾಕಿಸ್ತಾನದೊಂದಿಗೆ ಕೂಡ ವ್ಯಾಪಾರ ಒಪ್ಪಂದಕ್ಕಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.
Translation:
Pakistan is not a democracy so I met Real BOSS of Pak (Mulla Munir) on Lunch
Modi is a SMART Man- He declined my Invitation still US will do a Trade Deal with India
We Need Pakistan for Iran extravaganza as we cannot let another rogue Islamic Country have Nuke pic.twitter.com/NiJUxF9gUQ
— Megh Updates 🚨™ (@MeghUpdates) June 19, 2025
ಇಬ್ಬರು ಬುದ್ಧಿವಂತ ಜನರು, ತುಂಬಾ ಬುದ್ಧಿವಂತ ನಾಯಕರು ಆ ಯುದ್ಧವನ್ನು ಮುಂದುವರಿಸದಿರಲು ನಿರ್ಧರಿಸಿದ್ದಾರೆ ಎಂದು ನನಗೆ ತುಂಬಾ ಸಂತೋಷವಾಗಿದೆ. ಅವರಿಬ್ಬರೂ ಪರಮಾಣು ಶಕ್ತಿಗಳನ್ನು ಹೊಂದಿರುವ ರಾಷ್ಟ್ರಗಳು ಯುದ್ಧ ಮುಂದುವರಿಸದಿರಲು ನಿರ್ಧರಿಸಿದ್ದು ಖುಷಿಯ ಸಂಗತಿ ಎಂದರು.
ಉಪ್ಪಿನಂಗಡಿ: ಕುಮಾರಧಾರಾ ನದಿ ತೀರದಲ್ಲಿ ಮೊಸಳೆ ಪ್ರತ್ಯಕ್ಷ..! ಆತಂಕದಲ್ಲಿ ಸ್ಥಳೀಯರು..!