Latestಉಪ್ಪಿನಂಗಡಿಕರಾವಳಿಕ್ರೈಂ

ಉಪ್ಪಿನಂಗಡಿ: ಕುಮಾರಧಾರಾ ನದಿ ತೀರದಲ್ಲಿ ಮೊಸಳೆ ಪ್ರತ್ಯಕ್ಷ..! ಆತಂಕದಲ್ಲಿ ಸ್ಥಳೀಯರು..!

760

ನ್ಯೂಸ್ ನಾಟೌಟ್: ಉಪ್ಪಿನಂಗಡಿಯ 34 ನೆಕ್ಕಿಲಾಡಿ ಸಮೀಪದ ಕುಮಾರಧಾರಾ ನದಿ ದಡದಲ್ಲಿ ಮೊಸಳೆಯೊಂದು ಜೂ.18 ರಂದು ಸಂಜೆ ಕಾಣಿಸಿಕೊಂಡಿದೆ. ಮೊಸಳೆಯನ್ನು ನೋಡಲು ಜನ ಜಮಾಯಿಸುತ್ತಿದ್ದಂತೆ ಮೊಸಳೆ ಬಾಯನ್ನು ಅಗಲಿಸಿ ಆಕ್ರಮಣಕಾರಿ ವರ್ತಿಸಿ ನದಿ ನೀರಿಗೆ ಇಳಿದು ಹೋಗಿದೆ ಎನ್ನಲಾಗಿದೆ.

ಇದು ಶೇಖಬ್ಬ ಹಾಜಿ ಎಂಬವರ ಮನೆ ಬಳಿ ಕುಮಾರಧಾರಾ ನದಿ ದಡದಲ್ಲಿ ಮೊಸಳೆಯೊಂದು ವಿಶ್ರಾಂತಿ ಪಡೆಯುವುದನ್ನು ಮಕ್ಕಳು ದೂರದಿಂದ ಕಂಡಿದ್ದರು. ಇದನ್ನು ತಿಳಿದು ಸ್ಥಳೀಯ ಸೇರಿದ್ದಾರೆ.
ಎರಡು ವರ್ಷಗಳ ಹಿಂದೆ ಪಂಜಳದ ನೇತ್ರಾವತಿ ನದಿಯಲ್ಲಿಯೂ ದೊಡ್ಡ ಮೊಸಳೆಗಳೆರಡು ಪ್ರತ್ಯಕ್ಷವಾಗಿದ್ದವು.

ಕಳೆದ ವರ್ಷ ಇಲ್ಲಿನ ನೇತ್ರಾವತಿ ನದಿ ದಡದಲ್ಲಿ ದೊಡ್ಡ ಗಾತ್ರದ ಮೊಸಳೆಯೊಂದು ಪ್ರತ್ಯಕ್ಷವಾಗಿತ್ತು. ಮೊಸಳೆ ಇರುವ ಕಾರಣ ನದಿಗೆ ಮೀನು ಬೇಟೆಗೆಂದು ಹೋಗುವವರಲ್ಲಿ ಆತಂಕ ಮೂಡಿಸಿದೆ. ಕೆಲವು ದಿನಗಳ ಹಿಂದೆ ನದಿಯಲ್ಲಿ ನೀರು ಕಡಿಮೆ ಇದ್ದಾಗ ನೇತ್ರಾವತಿ ನದಿಯಲ್ಲಿ ಕಡವಿನ ಬಾಗಿಲ ಸಮೀಪ ಸುಮಾರು 10ರಷ್ಟಿದ್ದ ನೀರು ನಾಯಿ ಗಳ ಹಿಂಡು ಕಾಣಿಸಿಕೊಂಡಿತ್ತು ಎನ್ನಲಾಗಿದೆ.

ಯುವತಿಯ ಆತ್ಮಹತ್ಯೆ ಪ್ರಕರಣಕ್ಕೆ 8 ತಿಂಗಳ ಬಳಿಕ ಸ್ಫೋಟಕ ತಿರುವು..! ರೈತ ಮಹಿಳೆ ಎಂದು ಕಥೆ ಕಟ್ಟಿ 5 ಲಕ್ಷ ರೂ. ಪರಿಹಾರ ಪಡೆದಿದ್ದ ಕುಟುಂಬ..!

ಯುದ್ಧ ಪೀಡಿತ ಇರಾನ್‌ ನಿಂದ 110 ವಿದ್ಯಾರ್ಥಿಗಳು ಭಾರತಕ್ಕೆ ವಾಪಾಸ್, ತಡರಾತ್ರಿ ದೆಹಲಿಗೆ ಬಂದಿಳಿದ ವಿಮಾನ

See also  ಸುಳ್ಯ: ಅಕ್ರಮ ಮರಸಾಗಾಟ ಪತ್ತೆ:ಬೆಲೆ ಬಾಳುವ ಮರಗಳು ವಶಕ್ಕೆ
  Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget