ಕರಾವಳಿಕೊಡಗು

ಮಡಿಕೇರಿ:ಎಂಡಿಎಂಎ ಮಾರಾಟ ಮಾಡಲು ಯತ್ನ; ಆರೋಪಿ ಪೊಲೀಸ್ ಬಲೆಗೆ

ನ್ಯೂಸ್ ನಾಟೌಟ್ : ನಿಷೇಧಿತ ಮಾದಕ ವಸ್ತು ‘ಎಂಡಿಎಂಎ’ ಯನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಬಂಧಿಸಿರುವ ಘಟನೆ ಮಡಿಕೇರಿಯಿಂದ ವರದಿಯಾಗಿದೆ. ಮಡಿಕೇರಿಯ ಸೆನ್ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈತ ಪಿರಿಯಾಪಟ್ಟಣ ನಿವಾಸಿ ಮಹಮ್ಮದ್ ಆಲಿಶಾ(29) ಎಂದು ತಿಳಿದು ಬಂದಿದೆ. ಆತನ ಬಳಿಯಿದ್ದ ಎಂಡಿಎಂಎ ಯನ್ನು ಪೊಲೀಸರು ವಶ ಪಡಿಸಿಕೊಂಡಿದ್ದು, ವಿಚಾರಣೆ ಮಾಡಿದ್ದಾರೆ.ಮಡಿಕೇರಿಯ ಸಂಪಿಗೆಕಟ್ಟೆ ಬಳಿ ವ್ಯಕ್ತಿಯೋರ್ವ ನಿಷೇಧಿತ ಮಾದಕ ವಸ್ತು ಮಾರಾಟ ಮಾಡಲು ಪ್ರಯತ್ನಿಸುತ್ತಿರುವ ಬಗ್ಗೆ ಸೆನ್ ಪೊಲೀಸ್ ಠಾಣೆಗೆ ಖಚಿತ ಮಾಹಿತಿ ಲಭಿಸಿತ್ತು.

ಈ ಹಿನ್ನೆಲೆಯಲ್ಲಿ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಮಾಲು ಸಹಿತ ವಶಕ್ಕೆ ಪಡೆದರು ಎಂಬ ಮಾಹಿತಿಯಿದೆ. ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರ್ ರಾಜ್ ಅವರ ಮಾರ್ಗದರ್ಶನದಲ್ಲಿ ಸೆನ್ ಪೊಲೀಸ್ ಠಾಣಾ ವೃತ್ತನಿರೀಕ್ಷಕ ಸಿ.ಕೆ.ರಾಘವೇಂದ್ರ ನೇತೃತ್ವದಲ್ಲಿ ಸೆನ್ ಠಾಣೆಯ ಕ್ರೈಂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.

Related posts

ಸುಳ್ಯ: ಮರದಿಂದ ಬಿದ್ದು ವ್ಯಕ್ತಿಯ ದಾರುಣ ಸಾವು..! ಕೊಡಗಿನಿಂದ ಸಂಬಂಧಿಕರ ಮನೆಗೆ ಬಂದಿದ್ದವನ ದುರಂತ ಅಂತ್ಯ..!

ಉಪ್ಪಿನಂಗಡಿ: ಅಂಗಡಿಗೆ ನುಗ್ಗಿ ತರಕಾರಿ ಮೂಟೆಗಳನ್ನೇ ಕದ್ದೊಯ್ದ ಕಳ್ಳರು..! ಮುಂದೇನಾಯ್ತು?

ಕೆವಿಜಿ ಮಾತೃಸಂಸ್ಥೆ NMCಯಲ್ಲಿ ಡಾ. ಕೆವಿಜಿ ಜನ್ಮ ದಿನಾಚರಣೆ ಹಾಗೂ ಪುಷ್ಪ ನಮನ ಕಾರ್ಯಕ್ರಮ