ದೇಶ-ಪ್ರಪಂಚ

ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ ಮಗು ಮಾರಾಟ ದಂಧೆ ಕೇಸ್,ವೈದ್ಯನೇ ಶಾಮೀಲು..!

ನ್ಯೂಸ್ ನಾಟೌಟ್ :ರಾಜಧಾನಿ ಬೆಂಗಳೂರಿನಲ್ಲಿ (Bengaluru) ಪೋಷಕರು ಸೇರಿದಂತೆ ಜನರೇ ಬೆಚ್ಚಿ ಬೀಳಿಸುವಂತಹ ಘಟನೆ ವರದಿಯಾಗಿದೆ.ರಾಜಧಾನಿ ಬೆಂಗಳೂರಿನಲ್ಲಿ ಮಕ್ಕಳ ಮಾರಾಟ ದಂಧೆ (Baby sale racket) ಬಯಲಾಗಿದ್ದು, ಸಾಕಷ್ಟು ಜನರಿಗೆ ಆತಂಕ ಸೃಷ್ಟಿಸಿದೆ.

ಈ ದಂಧೆಯಲ್ಲಿ ವೈದ್ಯರೊಬ್ಬರು (Doctor) ಭಾಗಿಯಾಗಿರೋದು ಬೆಳಕಿಗೆ ಬಂದಿದ್ದು,ಇದೀಗ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಹೇಳಲಾಗಿದೆ.ಸದ್ಯ ವೈದ್ಯನೊಬ್ಬ ಸಿಸಿಬಿ ಪೊಲೀಸರ (CCB Police) ಬಲೆಗೆ ಬಿದ್ದಿದ್ದಾನೆ. ಬಂಧಿತ ವೈದ್ಯ ಕೇವಿನ್ ರಾಜಾಜಿನಗರದಲ್ಲಿ ಕ್ಲಿನಿಕ್ (Rajajinagara) ನಡೆಸುತ್ತಿದ್ದ ಎಂದು ವರದಿಯಾಗಿದೆ. ಆರೋಪಿ ಕೇವಿನ್ ಇಬ್ಬರು ಮಕ್ಕಳ ಮಾರಾಟ ಮಾಡಿರುವುದರ ಜೊತೆಗೆ ಮಕ್ಕಳಿಗೆ ಬರ್ತ್ ಸರ್ಟಿಫಿಕೇಟ್‌‌(Birth Certificate) ಕೊಡಿಸಲು ಸಹಾಯ ಮಾಡಿದ್ದ ಎನ್ನಲಾಗಿದೆ.

ಸಿಸಿಬಿ ಪೊಲೀಸರಿಗೆ ವೈದ್ಯ ಕೇವಿನ್ ಮೇಲೆ ಶಂಕೆ ವ್ಯಕ್ತವಾಗಿತ್ತು.ಮಾತ್ರವಲ್ಲ ಈತ ಪದವಿ ಮಾಡಿದ್ದೆನೆಂದು ಹೇಳಿಕೊಂಡಿದ್ದು,ಇದೀಗ ಆತನ ಬಣ್ಣ ಬಯಲಾಗಿದೆ.ಈತ ಯಾವುದೇ ಎಂಬಿಬಿಎಸ್ ಪದವಿಯನ್ನು ಪಡೆಯದೇ ಕ್ಲಿನಿಕ್ ನಡೆಸುತ್ತಿರುವ ಶಂಕೆ ವ್ಯಕ್ತವಾಗಿದೆ.ಸಿಸಿಬಿ ಪೊಲೀಸರು ವೈದ್ಯಕೀಯ ಪ್ರಮಾಣ ಪತ್ರಗಳ ಪರಿಶೀಲನೆ ನಡೆಸಿದ್ದು, ವೈದ್ಯನಲ್ಲದೆ ಕ್ಲಿನಿಕ್ ಇಟ್ಕೊಂಡಿದ್ದ ಆರೋಪ ಎದುರಾಗಿದೆ.

ಕಂದಮ್ಮಗಳ ಮಾರಾಟ ಜಾಲದ ಬಗ್ಗೆ ಸಿಸಿಬಿ ಅಧಿಕಾರಿಗಳು ವಿಚಾರಣೆ ತೀವ್ರಗೊಳಿಸಿದ ಬಳಿಕ ಅನೇಕ ಬೆಚ್ಚಿ ಬೀಳಿಸುವ ಅಂಶ ಬಯಲಾಗಿದೆ.ಈ ಪ್ರಕರಣಕ್ಕೆ ಸಂಬಂಧಿಸಿ ರಮ್ಯಾ ಎಂಬಾಕೆಯನ್ನ ಹೆಬ್ಬಾಳದಲ್ಲಿ ಬಂಧಿಸಿರುವ ಘಟನೆ ನಡೆದಿದೆ. ಆರೋಪಿ ರಮ್ಯಾ, ತನ್ನ ಸಂಬಂಧಿ ಯುವತಿಯ ಮಗುವನ್ನೇ ಮಾರಾಟ ಮಾಡಿದ್ದಳು ಎನ್ನುವ ವಿಚಾರ ಬಯಲಾಗಿದೆ.ಮದುವೆಗೂ ಮುನ್ನವೇ ಗರ್ಭ ಧರಿಸಿದ್ದ ಯುವತಿಗೆ ಹೆರಿಗೆ ಮಾಡಿಸಿ,ಆಕೆಯನ್ನ ಆರೈಕೆ ಮಾಡಿ ಮಗು ಮಾರಾಟ ಮಾಡಿದ್ದಳಂತೆ ಈ ಮಹಿಳೆ..!ಹಸುಗೂಸುಗಳ ಮಾರಾಟ ಪ್ರಕರಣದಲ್ಲಿ ಈವರೆಗೆ 10 ಮಂದಿಯನ್ನ ಸಿಸಿಬಿ ಪೊಲೀಸರು ಬಂಧಿಸಿದ್ದು,ಇದರಲ್ಲಿ ನಾಲ್ವರು ಮೊದಲೇ ಬಂಧಿತರಾಗಿ ಜೈಲು ಸೇರಿದ್ದರು.ಇದೀಗ ನಾಲ್ವರನ್ನ ಜೈಲಿನಿಂದ ಕರೆತಂದು ಆರೋಪಿಗಳ ಜೊತೆ ಮುಖಾಮುಖಿ ವಿಚಾರಣೆ ನಡೆಸಲು ಸಿಸಿಬಿ ಪೊಲೀಸರು ಮುಂದಾಗಿದ್ದಾರೆ.

Related posts

ಮಾಜಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ​ಆಸ್ಪತ್ರೆಗೆ ದಾಖಲು..! ಭಾರತದ ಮೊದಲ ಮಹಿಳಾ ರಾಷ್ಟ್ರಪತಿಗೇನಾಯ್ತು..?

ಚುನಾವಣಾ ಪ್ರಚಾರದಲ್ಲಿ ಮದುವೆ ಯಾವಾಗ ಎಂದು ಕೇಳಿದ ಕಾರ್ಯಕರ್ತರು..! ಉತ್ತರ ಕೊಟ್ಟು ವೇದಿಕೆಯಿಂದ ಇಳಿದ ರಾಹುಲ್..! ಇಲ್ಲಿದೆ ವಿಡಿಯೋ

ಹಿಂದೂ ಮಹಾಗಣಪತಿ ಶೋಭಾಯಾತ್ರೆ ವೇಳೆ ಗೋಡ್ಸೆ ಚಿತ್ರ ಪ್ರದರ್ಶನ, ಕೇಸ್ ದಾಖಲು