ಕರಾವಳಿವಾಣಿಜ್ಯಸಾಧಕರ ವೇದಿಕೆ

ಕಾಲೇಜು ಬಿಟ್ಟು ಸ್ಟಾರ್ಟಪ್ ಶುರು ಮಾಡಿದ ಮಂಗಳೂರಿನ ಯುವಕರು! ಕೇವಲ 5ರೂ.ಗೆ ಕೊಡೆ ! ಏನಿದರ ವಿಶೇಷತೆ?

332

ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಛತ್ರಿ ನಮ್ಮ ಕೈಯಲ್ಲಿ ಇರಲೇಬೇಕು ಅನ್ನುವುದು ಕೆಲವರ ವಾಡಿಕೆ ಇನ್ನು ಕೆಲವರಿಗೆ ಅದು ಅಗತ್ಯ. ಕೊಡೆ ಇಲ್ಲ ಅಂದ್ರೆ ಮಳೆಗಾಲ, ಬೇಸಿಗೆಗಾಲ ಎರಡನ್ನೂ ಕಳೆಯೋದೆ ಹಲವರಿಗೆ ಕಷ್ಟದ ವಿಷಯ. ಇನ್ಮೇಲೆ ನೀವು ಮಳೆಯಿರಲಿ, ಬಿಸಿಲಿರಲಿ ಮನೆಯಿಂದ ಕೊಡೆಯನ್ನು ತೆಗೆದುಕೊಂಡು ಹೋಗಬೇಕಂತಿಲ್ಲ. ಯಾಕಂದ್ರೆ, ಇಂತಹ ಕೊಡೆಯನ್ನೇ ಇಟ್ಟುಕೊಂಡು ಮಂಗಳೂರಿನ ಇಬ್ಬರು ಯುವಕರು ಸ್ಟಾರ್ಟಪ್ ಒಂದನ್ನು ಹುಟ್ಟುಹಾಕಿದ್ದಾರೆ.

ನೀವು ಮನೆಯಿಂದ ಹೊರಗೆ ಎಲ್ಲೇ ಇರಿ, ಕೊಡೆಯ ಅವಶ್ಯಕತೆ ಇದ್ದಾಗ ಖರೀದಿ ಮಾಡದೆ ಕೊಡೆ ನಿಮ್ಮ ಕೈಯಲ್ಲಿರಲಿದೆ. ಸೋಹನ್ ಎಂ ರೈ ಮತ್ತು ಮೆಲ್ರಾಯ್ ಸಲ್ಡಾನ್ಹಾ ಎಂಬ ಇಬ್ಬರು ಯುವಕರೇ ಈ ಕೊಡೆ  ಸ್ಟಾರ್ಟಪ್ ಉದ್ಯಮ ಹುಟ್ಟುಹಾಕಿದವರು. ಪರಸ್ಪರ ಛತ್ರಿ ಹಂಚಿಕೊಳ್ಳುವ ‘ಡ್ರಿಝಲ್’ ಎಂಬ ಆ್ಯಪ್ ಅನ್ನು ಈ ಇಬ್ಬರು ಯುವಕರು ವಿನ್ಯಾಸಗೊಳಿಸಿದ್ದಾರೆ.

ಈ ಆ್ಯಪ್ ಮೂಲಕ ಛತ್ರಿಯನ್ನು 5 ರೂ.ಗೆ ಬಾಡಿಗೆಗೆ ಪಡೆಯಬಹುದಾಗಿದೆ. ಇವರು ಅಭಿವೃದ್ಧಿ ಪಡಿಸಿದ ಆ್ಯಪ್ ಮೂಲಕ ಛತ್ರಿಯನ್ನು 5 ರೂ. ಗೆ ಬಾಡಿಗೆಗೆ ಪಡೆಯಬಹುದಾಗಿದೆ. ಹೀಗೆ ಕೊಡೆಯನ್ನು ಬಾಡಿಗೆ ನೀಡಲು ಮಂಗಳೂರಿನಾದ್ಯಂತ 12 ಕಿಯೋಸ್ಕ್‌ಗಳನ್ನು ಆರಂಭಿಸಲಾಗಿದೆ. ಈ ಕಿಯೋಸ್ಕ್‌ (kiosk)ಗಳಿಂದ ಸಾರ್ವಜನಿಕರು ಕೊಡೆಯನ್ನು ಬಾಡಿಗೆಗೆ ತೆಗೆದುಕೊಂಡು ಹೋಗಬಹುದಾಗಿದೆ.

ತಮ್ಮ ಉದ್ಯಮ ಕನಸಿಗಾಗಿ ಸೋಹನ್ ಎಂ ರೈ ಇಂಜಿನಿಯರಿಗ್‌ ವ್ಯಾಸಂಗವನ್ನೇ ತೊರೆದಿದ್ದಾರೆ, ಇವರ ಜೊತೆಗೂಡಿದವರು ಸೇಂಟ್ ಅಲೋಶಿಯಸ್ ಕಾಲೇಜಿನಲ್ಲಿ ಬಿಸಿಎ ವಿದ್ಯಾರ್ಥಿಯಾಗಿರುವ ಮೆಲ್ರಾಯ್ ಸಲ್ಡಾನ್ಹಾ . ಸದ್ಯ ಇಬ್ಬರು ಯುವಕರ ಸ್ಟಾರ್ಟಪ್ ಅಪ್ಲಿಕೇಷನ್ ಹಣ ಹೂಡಿಕೆಗಾಗಿ ಕಾಯುತ್ತಿದ್ದು, ಯಾರಾದರೂ ತಮ್ಮ ಸ್ಟಾರ್ಟಪ್ ಗೆ ಹಣ ಹೂಡಿದರೆ ಇನ್ನಷ್ಟು ಅಭಿವೃದ್ಧಿಪಡಿಸಲು ಈ ಯುವಕರು ಕಾಯುತ್ತಿದ್ದಾರೆ ಎಂದು ವರದಿ ತಿಳಿಸಿದೆ.

See also  ಮುಂದಿನ 5 ದಿನ ದ.ಕ. ಜಿಲ್ಲೆಗೆ ರೆಡ್ ಅಲರ್ಟ್..! ಮುನ್ನೆಚ್ಚರಿಕಾ ಕ್ರಮವಾಗಿ ಎನ್‌.ಡಿ.ಆರ್‌.ಎಫ್, ಎಸ್‌.ಡಿ.ಆರ್‌.ಎಫ್ ತಂಡ ಆಗಮನ
  Ad Widget     Ad Widget   Ad Widget   Ad Widget   Ad Widget   Ad Widget Ad Widget     Ad Widget   Ad Widget   Ad Widget   Ad Widget