ಸುಳ್ಯ

ಸೇತುವೆ ಮೇಲೆ ನಿಂತು ಸುಳ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರು ಮಾಡಿದ ಕೆಲಸ ನೋಡಿ, ಈ ಕಳಕಳಿಗೆ ಇರಲಿ ಒಂದು ಮೆಚ್ಚುಗೆ, ಇಲ್ಲಿದೆ ವಿಡಿಯೋ

ನ್ಯೂಸ್ ನಾಟೌಟ್: ಶಾಲಾ-ಕಾಲೇಜಿನ ಕೊಠಡಿಯೊಳಗೆ ಕುಳಿತು ಪಾಠ ಕೇಳುವುದಲ್ಲದೆ ಉತ್ತಮ ಕೆಲಸವನ್ನೂ ಮಾಡಿ ಮಾದರಿಯಾಗಬಹುದು ಅನ್ನುವುದನ್ನು ಸುಳ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರು ನಿರೂಪಿಸಿ ತೋರಿಸಿದ್ದಾರೆ.


ಸುಳ್ಯದಲ್ಲಿ ಮಧ್ಯಾಹ್ನದ ನಂತರ ಉತ್ತಮ ಮಳೆ ಸುರಿಯಿತು. ಒಂದಷ್ಟು ಕಡೆಯಲ್ಲಿ ನೀರು ನಿಂತು ವಾಹನ ಸವಾರರಿಗೆ ಸಮಸ್ಯೆಯಾಯಿತು. ಅಂತಹುದೇ ಒಂದು ಸಮಸ್ಯೆ ಕೊಡಿಯಾಲ್ ಬೈಲ್ ಬಳಿಯ ಸೇತುವೆಯಲ್ಲೂ ಆಯಿತು. ಸೇತುವೆ ಮೇಲೆ ಭಾರೀ ನೀರು ತುಂಬಿಕೊಂಡಿತ್ತು. ಇದರಿಂದ ವಾಹನ ಸವಾರರು ಅದರಲ್ಲೂ ದ್ವಿಚಕ್ರ ವಾಹನ ಸವಾರರು ಪರದಾಟ ನಡೆಸುತ್ತಿದ್ದರು. ಈ ವೇಳೆ ಮೂರ್ನಾಲ್ಕು ವಿದ್ಯಾರ್ಥಿನಿಯರು ಸೇತುವೆಯ ಮೇಲಿದ್ದ ಕಸವನ್ನು ಹೊರಕ್ಕೆ ತೆಗೆದು ಸರಾಗವಾಗಿ ನೀರು ಹರಿಯುವಂತೆ ಮಾಡಿದರು. ವಿದ್ಯಾರ್ಥಿನಿಯರ ಕಳಕಳಿಗೆ ಈಗ ಮೆಚ್ಚುಗೆ ವ್ಯಕ್ತವಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

Related posts

ಸುಳ್ಯ:ರೀಲ್ಸ್ ಮಾಡುತ್ತಲೇ ಜಾಹಿರಾತಿನಲ್ಲಿ ಅವಕಾಶ ಪಡೆದುಕೊಂಡ ಬಾಲಕಿ..!, ಅಮೆಜಾನ್ ಕಿಡ್ಸ್‌ವೇರ್‌ ಮಾಡೆಲ್ ಆಗಿ ಗುರುತಿಸಿಕೊಂಡ ಸಂಪಾಜೆಯ ಪ್ರತಿಭೆ

ಗೂನಡ್ಕ ಬೈಲೆಯಲ್ಲಿ ಮಸ್ತ್ ‘ಆಟಿ’ ಗೌಜಿ, ಕೆಸರಿನ ಗದ್ದೆಯಲ್ಲಿ ಮಿಂದೆದ್ದ ಯುವಕ-ಯುವತಿಯರು, ವಯಸ್ಸನ್ನೇ ಮರೆತು ಉತ್ಸಾಹ ಮೆರೆದ ಅಜ್ಜ-ಅಜ್ಜಿಯರು..!

ಸುಳ್ಯದ ಕುಮ್ ಕುಮ್ ಫ್ಯಾಶನ್ ನಲ್ಲಿ ಬ್ರಾಂಡೆಡ್ ರೈನ್‌ ಕೋಟ್ ಗಳ ಅಮೋಘ ಸಂಗ್ರಹ! ವಿವಿಧ ಬಣ್ಣಗಳ ಬ್ರಾಂಡೆಡ್ ಕಲರ್ ಫುಲ್ ರೈನ್ ಕೋಟ್‌ಗಳು!