ಕೊಡಗು

ಎಸ್ ಎಸ್ ಎಲ್ ಸಿ ಪರೀಕ್ಷೆ: ಕೊಡಗು ಜಿಲ್ಲೆಗೆ ಶೇ.86.48 ಫಲಿತಾಂಶ

122
Spread the love

ನ್ಯೂಸ್ ನಾಟೌಟ್ : ಕಳೆದ ಮಾರ್ಚ್ ಮತ್ತು ಏಪ್ರಿಲ್ ತಿಂಗಳಲ್ಲಿ ನಡೆದ ಎಸ್ಎಸ್ಎಲ್ ಸಿ ಪರೀಕ್ಷಾ ಫಲಿತಾಂಶ ಗುರುವಾರ ಪ್ರಕಟಗೊಂಡಿದೆ. ಕೊಡಗು ಜಿಲ್ಲೆಯಲ್ಲಿ 6,710 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆದಿದ್ದರು. ಇವರಲ್ಲಿ 5,803 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 3,088 ಬಾಲಕಿಯರು ಮತ್ತು 2,715 ಬಾಲಕರು ಉತ್ತೀರ್ಣರಾಗಿದ್ದು, ಜಿಲ್ಲೆಗೆ 86.48 ರಷ್ಟು ಫಲಿತಾಂಶ ಬಂದಿದ.

ತಾಲೂಕುವಾರು ಮಡಿಕೇರಿಯಲ್ಲಿ ಪರೀಕ್ಷೆಗೆ ಹಾಜರಾದ 1937 ವಿದ್ಯಾರ್ಥಿಗಳಲ್ಲಿ 1,756 ವಿದ್ಯಾ ಶೇ.90.60ರಷ್ಟು ಫಲಿತಾಂಶ ಬಂದಿದೆ. ಸೋಮವಾರಪೇಟೆಯಲ್ಲಿ ಪರೀಕ್ಷೆಗೆ ಹಾಜರಾದ 2,703 ವಿದ್ಯಾರ್ಥಿಗಳಲ್ಲಿ 2,304 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ವಿರಾಜಪೇಟೆಯಲ್ಲಿ ಪರೀಕ್ಷೆಗೆ ಹಾಜರಾದ 2,070 ವಿದ್ಯಾರ್ಥಿಗಳಲ್ಲಿ 1,743 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ವೇದಮೂರ್ತಿ ತಿಳಿಸಿದ್ದಾರೆ.

See also  ರಸ್ತೆ ಅಪಘಾತ: ಮಡಿಕೇರಿಯ ಯುವಕ ಸೇರಿ 6 ಮಂದಿ ದುರ್ಮರಣ
  Ad Widget   Ad Widget   Ad Widget