ಕೊಡಗು

ರಸ್ತೆ ಅಪಘಾತ: ಮಡಿಕೇರಿಯ ಯುವಕ ಸೇರಿ 6 ಮಂದಿ ದುರ್ಮರಣ

367
Spread the love

ಮಡಿಕೇರಿ: ಜಲ್ಲಿ ಸಾಗಿಸುತ್ತಿದ್ದ ಲಾರಿಯೊಂದು ಸೋಮವಾರ ಎರಡು ಕಾರು ಹಾಗೂ ಒಂದು ಬೈಕ್ ಮೇಲೆ ಉರುಳಿ ಬಿದ್ದ ಪರಿಣಾಮ ಕೊಡಗಿನ ಅಭ್ಯತ್ ಮಂಗಲದ ಯುವಕ ಸೇರಿದಂತೆ ಒಟ್ಟು ಆರು ಮಂದಿ ಸಾವಿಗೀಡಾದ ಘಟನೆ ನಡೆದಿದೆ.

ಬೆಂಗಳೂರಿನ ಹೊರವಲಯದ ಕುಂಬಳಗೋಡು ಬಳಿ ದುರಂತ ಸಂಭವಿಸಿದ್ದು ಬೈಕ್ ನಲ್ಲಿದ್ದ ವ್ಯಕ್ತಿಯನ್ನು ಜಿತಿನ್ ಚಾರ್ಜ್ ಎಂದು ಗುರುತಿಸಲಾಗಿದೆ. ಇವರು ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗದಲ್ಲಿದ್ದರು. ಮೃತ ಜಿತಿನ್ ಅಭ್ಯತ್ ಮಂಗಲದ ಗ್ರೀನ್ ಫೀಲ್ಡ್ ಎಸ್ಟೇಟ್ ನ ವ್ಯವಸ್ಥಾಪಕ ಜಾರ್ಜ್ ಅವರ ಪುತ್ರರಾಗಿದ್ದಾರೆ. ಜಿತಿನ್ ಮೃತ ದೇಹವನ್ನು ಇಂದು ಸಂಜೆ ಕೊಡಗಿಗೆ ತರಲಾಗುತ್ತದೆ. ಅಂತ್ಯ ಸಂಸ್ಕಾರ ಕಾರ್ಯ ಕೇರಳದ ಪಾಲಕ್ಕಾಡ್ ನಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

See also  ಫೆಬ್ರವರಿಯಲ್ಲಿ ವಿಜಯ್ ದೇವರಕೊಂಡ ಜತೆ ರಶ್ಮಿಕಾ ಎಂಗೇಜ್‌ಮೆಂಟ್?
  Ad Widget   Ad Widget   Ad Widget   Ad Widget   Ad Widget   Ad Widget