ಭಕ್ತಿಭಾವ

ಇಂದಿನಿಂದ ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ

513

ನ್ಯೂಸ್ ನಾಟೌಟ್: ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಇಂದಿನಿಂದ (ಶನಿವಾರ) ಲಕ್ಷದೀಪೋತ್ಸವ ಆರಂಭವಾಗಿದೆ.

ಇದೀಗ ಕ್ಷೇತ್ರದಲ್ಲಿ ವಿಶೇಷ ಪೂಜೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜತೆಗೆ ಆರು ದಿನಗಳ ಕಾಲ ನಡೆಯಲಿದ್ದು ಧಾರ್ಮಿಕ, ಜ್ಞಾನ , ಮನೋರಂಜನೆಯ ವಿವಿಧ ಕಾರ್ಯಕ್ರಮಗಳು ನಡೆಯಲಿದೆ.

ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಾಲಯ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ಭಕ್ತರ ಸ್ವಾಗತಕ್ಕೆ ಸರ್ವಸಿದ್ದತೆ ಆಗುತ್ತಿದೆ, ಶನಿವಾರ ಬೆಳಗ್ಗೆ ೧೦ :೩೦ ಕ್ಕೆ ಪ್ರೌಢ ಶಾಲೆಯ ಕೀಡಾಂಗಣದಲ್ಲಿ ಶಾಸಕ ಹರೀಶ್ ಪೂಂಜಾ ರಾಜ್ಯಮಟ್ಟದ ವಸ್ತು ಪ್ರದರ್ಶನ ಉದ್ಘಾಟಿಸಿದರು. ಶ್ರೀ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗೆಡೆ ಉಪಸ್ಥಿತರಿದ್ದರು. ನವೆಂಬರ್ ೧೯ ರಂದು ೩ ಗಂಟೆಗೆ ೧೦ನೇ ವ‍ರ್ಷದ ಪಾದಯಾತ್ರೆ ನಡೆಯಲಿದ್ದು ಹೆಚ್ಚಿನ ಭಕ್ತರು ಪಾಲ್ಗೊಳ್ಳಲಿದ್ದಾರೆ. ನವೆಂಬರ್ ೨೦ ರಂದು ಕೆರೆಕಟ್ಟೆ ಉತ್ಸವ , ೨೧ ರಂದು ಲಲಿತೋದ್ಯಾನ ಉತ್ಸವ, ೨೨ ರಂದು ಕಂಚಿ ಮಾರುಕಟ್ಟೆ ಉತ್ಸವ , ೨೩ ರಂದು ಗೌರಿಮಾರು ಉತ್ಸವ ಹಾಗೂ ೨೪ ರಂದು ಭಗವಾನ್ ಚಂದ್ರನಾಥ ಸ್ವಾಮಿ ಸಮಾವರಣ ಪೂಜೆ ನಡೆಯಲಿದೆ ಎಂದು ಕ್ಷೇತ್ರದ ಅಧಿಕಾರಿಗಳು ತಿಳಿಸಿದ್ದಾರೆ.

See also  ಕುಕ್ಕೆ ಶ್ರೀ ಸುಬ್ರಹ್ಮಣ್ಯನಿಗೇ ಎದುರಾಗಿತ್ತು ಒಂದು ಸಮಸ್ಯೆ..!
  Ad Widget   Ad Widget   Ad Widget     Ad Widget   Ad Widget   Ad Widget   Ad Widget   Ad Widget