ಕರಾವಳಿ

ಮನಸ್ಸಿದ್ದರೆ ಮಾರ್ಗ: ಅದ್ಭುತ ತಾರಸಿ ಕೃಷಿ ಲೋಕ ಸೃಷ್ಟಿಸಿದ ಎಸ್‌ಪಿ ಲೋಕನಾಥ್‌ ದಂಪತಿ

ಸಂಪಾಜೆ: ಹಸಿರು ವರ್ಣದ ದಂಟಿರುವ ಬಸಳೆಯನ್ನು ಸಾಮಾನ್ಯವಾಗಿ ಎಲ್ಲರೂ ಕಂಡಿದ್ದಾರೆ. ಆದರೆ ಕೆಂಪು ಬಣ್ಣದ ದಂಟುಗಳಿರುವ ಅಪರೂಪದ ಬಸಳೆಯನ್ನು ಇಲ್ಲೊಬ್ಬರು ಬೆಳೆಯುತ್ತಿದ್ದಾರೆ. ಇವರೇ ಎಸ್.ಪಿ ಲೋಕನಾಥ್‌ ದಂಪತಿ. ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ಕಲ್ಲುಗುಂಡಿ ಸಮೀಪದಲ್ಲಿ ಇವರ ವಾಸ ಸ್ಥಳ.ಮೂರು ಅಂತಸ್ತಿನಿಂದ ಕೂಡಿದ ಮನೆಯ ಟೆರೆಸ್ ನಲ್ಲಿ ತರಹೇವಾರಿ ತರಕಾರಿ ಗಿಡಗಳೊಂದಿಗೆ ಕೆಂಪು ಬಸಳೆ ನಳನಳಿಸುತ್ತದೆ.‌

ಕೆಂಪು ಬಸಳೆ ವೈಶಿಷ್ಟ್ಯ

ಈ ಬಸಳೆ ಹಸಿರು ಬಸಳೆಗಿಂತ ತುಂಬ ರುಚಿಕರವಾಗಿದ್ದು ಹೆಚ್ಚು ಸಿಹಿಯಾಗಿದೆ. ಇದರ ಎಲೆಗಳ ಗಾತ್ರ ದೊಡ್ಡದಾಗಿದೆ. ಹಸಿರು ಬಸಳೆಗಿಂತ ದಪ್ಪಗಿದ್ದರೂ ಮೃದುವಾಗಿ ಬೇಯುತ್ತವೆ. ಬೇಯುವಾಗಲೇ ಘಮಘಮ ಪರಿಮಳ ಹೊರಸೂಸುವ ಈ ಬಸಳೆಯ ದಂಟಿನೊಳಗಿರುವ ತಿರುಳೂ ರುಚಿಕರ.


ಕೆಂಪು ಬಸಳೆಯ ಜತೆಗೆ ಲೊಕನಾಥ್ ಮತ್ತು ಅವರ ಪತ್ನಿ

ಔಷಧೀಯ ಗುಣಗಳ ಆಗರ

ಈ ಬಸಳೆಯ ಎಲೆಗಳ ರಸ ಬೆಂಕಿಯಿಂದ ಸುಟ್ಟ ಗುಳ್ಳೆಗಳ ಉಪಶಮನಕ್ಕೆ ಸೂಕ್ತ ಔಷಧವೂ ಕೂಡ. ಒಂದೆರಡು ದೊಡ್ಡ ದಂಟುಗಳ ಸುರುಳಿಯಿದ್ದರೆ ಒಂದು ಕಿಲೋ ತೂಗುತ್ತದೆ. ಪೇಟೆಯಲ್ಲಿ ಒಳ್ಳೆ ಬೆಲೆಯಿದೆ.ಎಸ್.ಪಿ ಅವರ ಮನೆಯಲ್ಲಿ 40 ಉದ್ದದ ಬಸಳೆ ಬೆಳೆದಿದ್ದು ಇವರ ಮನೆಯಲ್ಲಿ ಬೆಳೆದ ಬಸಳೆಯನ್ನು ಅನೇಕರಿಗೆ ಹಂಚಿದ್ದಾರೆ..ಒಂದು ಸಲ ನೆಟ್ಟ ಬಳ್ಳಿ ಹಲವು ವರ್ಷ ಬದುಕುವ ಗುಣ ಇದಕ್ಕಿದೆ.


40 ಅಡಿ ಉದ್ದದ ಕೆಂಪು ಬಸಳೆ

ತಾರಸಿ ಕೃಷಿ ಸ್ಪೆಶಲ್

ಇವಿಷ್ಟು ಮಾತ್ರವಲ್ಲ , ಎಸ್.ಪಿ ದಂಪತಿ ತಾರಸಿ ಮೇಲೆ ಹೂವಿನ ಗಿಡಗಳು ಸೇರಿದಂತೆ, ತರಕಾರಿ ಗಿಡಗಳು, ಔಷಧೀಯ ಸಸ್ಯಗಳು ಹಾಗೂ ಹಣ್ಣಿನ ಗಿಡಗಳನ್ನು ನೆಟ್ಟು ಮಾದರಿ ಕೃಷಿಕರೂ ಎಂದೆನಿಸಿಕೊಂಡಿದ್ದಾರೆ. ಸುಮಾರು 500ಕ್ಕೂ ಮಿಕ್ಕಿ ನಿಂಬೆ ಹಣ್ಣು ಬಿಡುವ ಗಿಡ ಇವರ ಬಳಿಯಿದ್ದು, ಅವುಗಳೆಲ್ಲವನ್ನು ಅಕ್ಕ ಪಕ್ಕದ ಮನೆಯವರಿಗೆ ಹಂಚುವುದೇ ಇವರ ಬಳಿಯಲ್ಲಿರುವ ಬಹುದೊಡ್ಡ ಗುಣ.


ಇಂಡೋನೇಷ್ಯಾ ತಳಿಯ ಪಪ್ಪಾಯ ಹಣ್ಣು

ವಿಡಿಯೋ ವೀಕ್ಷಿಸಲು ಕೆಳಗಿನ ಲಿಂಕ್‌ ಕ್ಲಿಕ್ಕಿಸಿ

ಇವರ ಧರ್ಮಪತ್ನಿ ಕೂಡ ಇವರ ಈ ಕೃಷಿಗೆ ಸಾಥ್ ನೀಡುತ್ತಿದ್ದಾರೆ. ಇದು ಬರಿ ಗಿಡಗಳಲ್ಲ ಅವುಗಳು ಮಕ್ಕಳಂತೆ ಎನ್ನುವ ಇವರಿಗೆ ಇನ್ನೂ ವಿವಿಧ ನಮೂನೆಯ ಗಿಡಗಳನ್ನು ನೆಡುವ ಇರಾದೆಯಿದೆ.ಈ ಗಿಡಗಳು ನಮ್ಮ ಮನಸ್ಸಿನ ದುಗುಡವನ್ನ ದೂರ ಮಾಡಿ, ಮನಸ್ಸಿಗೆ ನೆಮ್ಮದಿಯ ವಾತಾವರಣವನ್ನು ಸೃಷ್ಟಿ ಮಾಡುತ್ತವೆ. ಇವುಗಳ ಆರೈಕೆ ಮಾಡುತ್ತಲೇ ನಮಗೆ ಸಮಯ ಹೋಗುವುದೇ ಗೊತ್ತಾಗುವುದಿಲ್ಲ. ಈ ವಯಸ್ಸಿನಲ್ಲಿಯೂ ಚೈತನ್ಯದ ಚಿಲುಮೆಯಂತೆ ಕೃಷಿ ಕಾಯಕ ಮಾಡುತ್ತಿರುವ ಈ ದಂಪತಿಗಳಿಗೆ ನಮ್ಮದೊಂದು ಸಲಾಮ್…

Related posts

ಕಳೆದೊಂದು ವರ್ಷದಿಂದ ಪೊಲೀಸರ ಜೊತೆಯೇ ಕಳ್ಳ-ಪೊಲೀಸ್ ಆಟ..! ಕೊನೆಗೂ ಸಿಕ್ಕಿಬಿದ್ದ ಕಡಬ ಪೊಲೀಸರ ಬಲೆಗೆ

ಕೋಟಿ-ಚೆನ್ನಯ್ಯ ನೇಮೋತ್ಸವದ ‘ಕೋಟಿ’ ಪಾತ್ರಿ ನಿಗೂಢ ಸಾವಿನ ಹಿಂದಿನ ರಹಸ್ಯವೇನು..? ಅಡ್ಡೂರು ಸೇತುವೆ ಬಳಿ ಆಟೋ ಸ್ಟಾರ್ಟ್ ಆಗಿಯೇ ನಿಂತುಕೊಂಡಿದ್ದೇಕೆ..?

ಮಡಿಕೇರಿ: ದಯಾ ಮರಣ ಕೋರಿ ಜಿಲ್ಲಾಧಿಕಾರಿಗೆ ಪತ್ರ ಬರೆದ ಮಂಗಳಮುಖಿ