ಕರಾವಳಿಕ್ರೈಂರಾಜಕೀಯ

ಸೌಜನ್ಯ ಮನೆಗೆ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಭೇಟಿ, ಸೌಜನ್ಯ ತಾಯಿಗೆ ಧೈರ್ಯ ತುಂಬಿದ ಹಿಂದೂ ನಾಯಕ

ನ್ಯೂಸ್ ನಾಟೌಟ್: ಭೀಕರ ಅತ್ಯಾಚಾರಕ್ಕೊಳಗಾಗಿ ಕೊಲೆಗೀಡಾದ ಸೌಜನ್ಯ ಮನೆಗೆ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಶನಿವಾರ (ಆಗಸ್ಟ್‌ 12) ಭೇಟಿ ನೀಡಿದರು. ಈ ವೇಳೆ ನಿಮ್ಮೊಂದಿಗೆ ನಾವಿದ್ದೇವೆ ಅನ್ನುವ ಧೈರ್ಯವನ್ನು ಮುತಾಲಿಕ್ ಸೌಜನ್ಯ ಕುಟುಂಬಕ್ಕೆ ತುಂಬಿದರು.

ಸೌಜನ್ಯಳ ಸಾವಿಗೆ ಇಷ್ಟು ವರ್ಷವಾದರೂ ನ್ಯಾಯ ಸಿಗದಿರುವುದಕ್ಕೆ ಬೇಸರವಿದೆ. ಆಕೆಗಾದ ಅನ್ಯಾಯಕ್ಕೆ ನ್ಯಾಯ ಸಿಗಲೇಬೇಕೆಂದು ನಾವು ಕೂಡ ಆಗ್ರಹಿಸುತ್ತೇವೆ. ತಪ್ಪಿತಸ್ಥರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮಕ್ಕೆ ಒಳಪಡಿಸಬೇಕೆಂದು ಮುತಾಲಿಕ್ ಆಗ್ರಹಿಸಿದ್ದಾರೆ. ಈ ವೇಳೆ ಸೌಜನ್ಯ ತಂದೆ ಚಂದಪ್ಪ ಸೇರಿದಂತೆ ಸೌಜನ್ಯ ಕುಟುಂಬಸ್ಥರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಸೌಜನ್ಯ ಕುಟುಂಬದ ಪರವಾಗಿ ನಿಂತಿರುವ ಹಾಗೂ ಸೌಜನ್ಯ ಹತ್ಯೆ ಆರೋಪಿಗಳನ್ನು ಬಂಧಿಸಲೇಬೇಕೆಂದು ಹೋರಾಟ ನಡೆಸುತ್ತಿರುವ ಹಿಂದೂ ನಾಯಕ ಮಹೇಶ್ ಶೆಟ್ಟಿ ತಿಮರೋಡಿ ನಿವಾಸಕ್ಕೂ ಪ್ರಮೋದ್ ಮುತಾಲಿಕ್ ಭೇಟಿ ನೀಡಿದ್ದರು. ತಿಮರೋಡಿ ಅವರಿಂದ ಮುಂದಿನ ಹೋರಾಟದ ಬಗೆಗಿನ ಮಾಹಿತಿಯನ್ನು ಪಡೆದುಕೊಂಡಿದ್ದರು. ಈ ವೇಳೆ ಹೋರಾಟಕ್ಕೆ ನಾವು ಕೂಡ ನಿಮ್ಮೊಂದಿಗೆ ಇದ್ದೇವೆ ಎಂದು ಮುತಾಲಿಕ್ ಧೈರ್ಯ ತುಂಬಿದ್ದರು.

Related posts

ಮುಂಬೈನ ಮಾರ್ಕೆಟ್ ನಲ್ಲಿ ಭಾರಿ ಅಗ್ನಿ ಅವಘಡ! ಬೆಂಕಿಯಲ್ಲಿ ಹಲವರು ಸಿಲುಕಿರೋ ಶಂಕೆ!

ಮಂಗಳೂರು: ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯರ ಜಡೆ ಜಗಳದಿಂದ ಇಡೀ ಶಾಲೆಯೇ ಖಾಲಿ..! 75 ವರ್ಷಗಳ ಇತಿಹಾಸವಿರುವ ಶಾಲೆಯಲ್ಲಿ ಇದೇನಿದು ಗಲಾಟೆ..?

ಅಬ್ಬಾಬ್ಬ.. ಒಂದಲ್ಲ ಎರಡಲ್ಲ ನಾಲ್ಕು ಕರುಗಳಿಗೆ ಜನ್ಮ ನೀಡಿದ ಹಸು!,’ವೈರಲ್ ಆಕಳ’ನ್ನು ನೋಡೋದಕ್ಕೆ ಜನವೋ ಜನ!