ಕರಾವಳಿಕೊಡಗು

ರಶ್ಮಿಕಾ ಮಂದಣ್ಣ ಏನ್ ಮಾಡ್ತಿದ್ದಾರೆ ಅರ್ಥ ಆಯ್ತಾ?,ಕೊಡಗಿನ ಬೆಡಗಿ ಕನ್ನಡಿ ಮುಂದೆ ಈ ರೀತಿ ನಿಂತಿದ್ಯಾಕೆ?

ನ್ಯೂಸ್‌ ನಾಟೌಟ್‌: ಈ ಬಾರಿ ಮಾರ್ಚ್ 22ರಿಂದ ಮೇ 26ರವರೆಗೆ ಬಹುನಿರೀಕ್ಷಿತ ಐಪಿಎಲ್ ಟೂರ್ನಿ ನಡೆಯಲಿದೆ. ಮಾರ್ಚ್ 19ಕ್ಕೆ ಆರ್‌ಸಿಬಿ ಅನ್‌ಬಾಕ್ಸ್ ಈವೆಂಟ್‌ಗೆ ವೇದಿಕೆ ಸಜ್ಜಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಅನ್‌ಬಾಕ್ಸ್ ಇವೆಂಟ್ ಕುರಿತ ಪ್ರೋಮೊದಲ್ಲಿ  ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ.

ಆರ್‌ಸಿಬಿ ಅನ್‌ಬಾಕ್ಸ್ (RCB Unbox) ಇವೆಂಟ್ ಪ್ರೋಮೊದಲ್ಲಿ ಈಗಾಗಲೇ ಶಿರಾಜ್‌ಕುಮಾರ್‌, ಸುದೀಪ್‌, ರಿಷಬ್‌, ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಕಾಣಿಸಿಕೊಂಡಿದ್ದಾರೆ. ಕಳೆದೊಂದು ವಾರದಿಂದ ಅರ್ಥ ಆಯ್ತಾ? ಎಂದು ಆರ್‌ಸಿಬಿ ಚಮಕ್ ಕೊಡುತ್ತಲೇ ಬರುತ್ತಿದೆ. ಇದೀಗ ನ್ಯಾಶನಲ್‌ ಕ್ರಶ್‌ ರಶ್ಮಿಕಾ ಮಂದಣ್ಣ ಅವರ ಸರದಿ. Royal Challengers Bangalore ಎನ್ನುವ ಹೆಸರಿನಲ್ಲಿ ಬೆಂಗಳೂರು ಪದದ ಇಂಗ್ಲೀಷ್ ಅಕ್ಷರಗಳನ್ನು, ಉಚ್ಚಾರಣೆ ಬದಲಿಸಿದೆ. Bengaluru ಎಂದು ಮಾಡಲಾಗುತ್ತಿದೆ. ನಾಳೆ (ಮಾರ್ಚ್‌ 19) ನಡೆಯುವ ಆರ್‌ಸಿಬಿ ಅನ್‌ಬಾಕ್ಸ್ ಇವೆಂಟ್‌ನಲ್ಲಿ ಇದು ಅಧಿಕೃತವಾಗುತ್ತಿದೆ.

ಆರ್​ಸಿಬಿ ತನ್ನ ಅಭಿಯಾನ ಆರಂಭಿಸುವ ಮುನ್ನ ಪೂರ್ವಭಾವಿಯಾಗಿ ಅಭಿಮಾನಿಗಳಿಗಾಗಿ ಈ ಸಲವೂ ವಿಶೇಷ ಕಾರ್ಯಕ್ರಮವೊಂದನ್ನು ಏರ್ಪಡಿಸಿದ್ದು, ಈಗಾಗಲೇ ಎಲ್ಲರಿಗೂ ತಿಳಿದಿದೆ. ಕಳೆದೆರಡು ವರ್ಷಗಳಿಂದ ಆರ್​ಸಿಬಿ ಅನ್​ಬಾಕ್ಸ್​(RCB’s Unbox Event) ಹೆಸರಿನಲ್ಲಿ ನಡೆಯುತ್ತ ಬಂದಿದೆ. ಅಭಿಮಾನಿಗಳಿಗಾಗಿ ನಡೆಸುವ ಈ ಕಾರ್ಯಕ್ರಮದಲ್ಲಿ ತಂಡದ ಹೊಸ ಜೆರ್ಸಿ ಅನಾವರಣ ಸೇರಿ ಹಲವು ಅಚ್ಚರಿಯನ್ನು ಘೋಷಣೆ ಮಾಡುವುದು ಈ ಕಾರ್ಯಕ್ರಮದ ವಿಶೇಷತೆ.ರಶ್ಮಿಕಾ ಅವರ ಕ್ಯಾರವ್ಯಾನ್‌ನ ಕನ್ನಡಿಯಲ್ಲಿ Royal Challengers Bangalore ಎಂದು ಬರೆದಿತ್ತು. ಕ್ಯಾರವ್ಯಾನ್‌ ಒಳ ಬಂದ ಅವರು ಅದನ್ನು ನೋಡಿ Bangalore ಎನ್ನುವುದನ್ನು ಅಳಿಸಿ ಅರ್ಥ ಆಯ್ತಾ? ಎಂದು ಕೇಳಿದ್ದಾರೆ.

Related posts

ಸಂಪಾಜೆ: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗಣರಾಜ್ಯೋತ್ಸವ ಸಂಭ್ರಮ

ಅಕ್ರಮ ಗೋಸಾಗಾಟ, ಬಜರಂಗದಳ ಕಾರ್ಯಕರ್ತರ ದಾಳಿ

ಸುಳ್ಯ: ಅಡ್ಕಾರಿನ ಪಯಸ್ವಿನಿ ನದಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ