ಕರಾವಳಿ

ಕು.ಸೌಜನ್ಯ ಮನೆಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಭೇಟಿ, ಆ.27 ರಂದು ನಡೆಯಲಿರುವ ಹೋರಾಟದಲ್ಲಿ ಭಾಗಿಯಾಗುವಂತೆ ಸೌಜನ್ಯ ತಾಯಿಗೆ ಆಹ್ವಾನ

ನ್ಯೂಸ್ ನಾಟೌಟ್ :ಆ. 27 ರಂದು ಬೆಳ್ತಂಗಡಿಯಲ್ಲಿ ಭಾರತೀಯ ಜನತಾ ಪಾರ್ಟಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದು, ಈ ಪ್ರಯುಕ್ತ ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜ ಅವರ ನೇತೃತ್ವದಲ್ಲಿ ಬಿಜೆಪಿ ಮುಖಂಡರು ಆ.24 ರಂದು ಕು. ಸೌಜನ್ಯರ ಪಾಂಗಾಳ ಮನೆಗೆ ಭೇಟಿ ನೀಡಿ ಆಹ್ವಾನಿಸಿದರು.

ಸೌಜನ್ಯ ಪ್ರಕರಣದ ನೈಜ ಆರೋಪಿಗಳ ಪತ್ತೆಗಾಗಿ ಆಗ್ರಹಿಸಿ ಬೆಳ್ತಂಗಡಿಯಲ್ಲಿ ಆ. 27 ರಂದು ಭಾರತೀಯ ಜನತಾ ಪಾರ್ಟಿ ಪ್ರತಿಭಟನಾ ಹೋರಾಟ ಹಮ್ಮಿಕೊಂಡಿದೆ. ಇದರಲ್ಲಿ ಭಾಗಿಯಾಗುವಂತೆ ಸೌಜನ್ಯ ತಾಯಿ ಕುಸುಮಾವತಿ ಅವರನ್ನು ಈ ಸಂದರ್ಭದಲ್ಲಿ ಆಹ್ವಾನಿಸಲಾಯಿತು.

ಈ ವೇಳೆ ಬಿಜೆಪಿ ಮಂಡಲಾಧ್ಯಕ್ಷ ಜಯಂತ್ ಕೋಟ್ಯಾನ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಗಣೇಶ್ ಗೌಡ ನಾವೂರು, ಸೀತಾರಾಮ ಬೆಳಾಲ್, ಜಯಂತ ಗೌಡ ಗುರಿಪಳ್ಳ ಇದ್ದರು.

Related posts

ಪ್ರವೀಣ್‌ ನೆಟ್ಟಾರ್‌ ಹತ್ಯೆ ನಡೆಸಿದ್ದು ಇದೇ ಕಾರಣಕ್ಕೆ..! ಎನ್‌ಐಎ ಹೇಳಿದ ಸ್ಫೋಟಕ ಸತ್ಯ

ಸುಳ್ಯ: ಸ್ಕೂಟರ್ ಗೆ ಹಿಂಬದಿಯಿಂದ ಗುದ್ದಿದ ಕಾರು, ಸವಾರ ಗಂಭೀರ

ಕಾಂಗ್ರೆಸ್ ಬಣಗಳ ಮಧ್ಯೆ ಮಾರಾಮಾರಿ ಹೊಡೆದಾಟ