ಜೀವನಶೈಲಿ

Saregamapa Manjamma: ಅಕ್ಕ ರತ್ನಮ್ಮ ಜತೆ ಹಾಡುಹೇಳುತ್ತಿದ್ದ ತಂಗಿ ಮಂಜಮ್ಮ ಇನ್ನಿಲ್ಲ; ʼಸರಿಗಮಪʼ ವೇದಿಕೆಯಲ್ಲಿ ಪಾಲ್ಗೊಂಡು ಜನಪ್ರಿಯತೆ ಪಡೆದುಕೊಂಡಿದ್ದ ಅಂಧ ಗಾಯಕಿಯರು

ನ್ಯೂಸ್‌ ನಾಟೌಟ್‌ : ಜನಪ್ರಿಯ ರಿಯಾಲಿಟಿ ಶೋ ʼಸರಿಗಮಪʼದಲ್ಲಿ ಅಂಧ ಗಾಯಕಿರಾದ ರತ್ನಮ್ಮ ಹಾಗೂ ಮಂಜಮ್ಮ ಭಾಗವಹಿಸಿ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿದ್ದರು.ಇದೀಗ ಗಾಯಕಿ ಮಂಜಮ್ಮ ಅನಾರೋಗ್ಯದಿಂದ ನಿಧನರಾಗಿದ್ದಾರೆ ಎನ್ನುವ ಸುದ್ದಿ ಬಹಳ ನೋವನ್ನುಂಟು ಮಾಡಿದೆ.

ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಡಿವಿ ಹಳ್ಳಿ ಗ್ರಾಮದ ಮಂಜಮ್ಮ ಅವರು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಚಿಕಿತ್ಸೆ ಫಲಿಸದೆ  ವಿಧಿವಶರಾಗಿದ್ದಾರೆ ಎಂದು ತಿಳಿದು ಬಂದಿದೆ. ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದು,ತಂಗಿ ಮಂಜಮ್ಮ ನಿಧನದಿಂದ ಅಕ್ಕ ರತ್ನಮ್ಮ ಅವರ ಆಕ್ರಂದನ ಮುಗಿಲು ಮುಟ್ಟಿದೆ.

ಇವರಿಬ್ಬರು ದೇವಸ್ಥಾನವೊಂದರ ಮುಂದೆ ಮಂಜಮ್ಮ – ರತ್ನಮ್ಮ ಅವರು ಹಾಡುತ್ತಿದ್ದರು. ʼಸರಿಗಮಪʼ ಶೋನಲ್ಲಿ ಭಾಗಿಯಾದ ಬಳಿಕ ಅವರು ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದ್ದರು.ಅವರಿಗೆ ಮನೆಯಿಲ್ಲ ಅನ್ನುವ ವಿಚಾರ ತಿಳಿದು ನವರಸ ನಾಯಕ ಜಗ್ಗೇಶ್‌ ಅವರು ಮನೆ ಕಟ್ಟಿಕೊಡುವುದಾಗಿ ಹೇಳಿದ್ದರು. ಅದರಂತೆ ತುಮಕೂರಿನ ತಮ್ಮ ಅಭಿಮಾನಿ ಸಂಘದ ಮೂಲಕ ಬೇಕಾದ ವ್ಯವಸ್ಥೆ ಮಾಡುವುದಕ್ಕೆ ಜಗ್ಗೇಶ್ ಸೂಚಿಸಿದ್ದರು.‌ ಬಳಿಕ ಕೆಲವೇ ಕೆಲವು ದಿನಗಳಲ್ಲಿ ಅವರಿಗೆ ಮನೆ ಕಟ್ಟಿ ಕೊಡಲಾಗಿತ್ತು. ಮನೆಗೆ ʼಜಗ್ಗೇಶ್‌ ಪರಿಮಳ ನಿಲಯʼ ಎಂದು ಹೆಸರಿಡಲಾಗಿತ್ತು.ಇದಲ್ಲದೆ ಅರ್ಜುನ್‌ ಜನ್ಯ ಅವರು ಕೂಡ ‘ನನಗೆ ಶಕ್ತಿ ಇರುವ ತನಕ ಈ ಸಹೋದರಿಯ ಕುಟುಂಬದ ತಿಂಗಳ ರೇಷನ್‌ ವ್ಯವಸ್ಥೆ ನನ್ನದು’ ಎಂದು ಹೇಳಿದ್ದರು.ಇದೀಗ ಮಂಜಮ್ಮ ಅವರು ನಿಧನದ ವಾರ್ತೆ ದುಖಃವನ್ನುಂಟು ಮಾಡಿದೆ.

Related posts

ಮಾವಿನ ಹಣ್ಣಿನ ಖರೀದಿಗೂ ಬಂತು ಇಎಂಐ! ಏನಿದು ವ್ಯಾಪಾರಿಗಳ ಹೊಸ ಪ್ಲಾನ್!

ಮೊದಲ ರಾತ್ರಿಯಂದೇ ಹೆಣ್ಣು ಮಗುವಿಗೆ ಜನ್ಮ ನೀಡಿದ ನವವಿವಾಹಿತೆ..! ಮೊದಲ ರಾತ್ರಿಯ ಕನಸಿನಲ್ಲಿ ತೇಲಾಡುತ್ತಿದ ವರನಿಗೆ ಆಘಾತ..!

ಚಳಿಗಾಲದಲ್ಲಿ ತುಟಿಯ ರಕ್ಷಣೆ ಮುಖ್ಯ : ಮನೆಯಲ್ಲೇ ತಯಾರಿಸಬಹುದು ಸುಲಭವಾಗಿ ಲಿಪ್ ಬಾಮ್